ಡಿಜಿಟೈ ಇಂಡಿಯಾ (www.digiteye.in) ಎಂಬುದು ರಾಯಿಟರ್ಸ್ ಮತ್ತಿತರ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸುದ್ದಿ ಘಟಕಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಕಾಲ ಕಾರ್ಯನಿರ್ವಹಿಸಿ ಅನುಭವ ಪಡೆದಿರುವ ಅನುಭವಿ ಪತ್ರಕರ್ತರ ತಂಡವನ್ನು ಹೊಂದಿರುವ ಒಂದು ಸ್ವತಂತ್ರ, ಪೂರ್ಣ ಪ್ರಮಾಣದ ಸತ್ಯ ಪರಿಶೀಲನಾ ಉಪಕ್ರಮ.
ಸುದ್ದಿಗಳಿಗಾಗಿ ಡಿಜಿಟೈ ಇಂಡಿಯಾ ಸಾಮಾಜಿಕ ಮಾಧ್ಯಮ ಮತ್ತು ಮುಖ್ಯವಾಹಿನಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿರುತ್ತದೆ. ಆದರೆ, ಸತ್ಯ-ಪರಿಶೀಲನೆಗಳ ಆಯ್ಕೆ ಮಾಡುವಾಗ ನಾವು ಕ್ಷುಲ್ಲಕ ಮನರಂಜನೆ ಅಥವಾ ವಿಡಂಬನೆ-ಆಧಾರಿತ ಸುದ್ದಿಗಳಿಂದ ದೂರ ಉಳಿಯುತ್ತೇವೆ. ಅದರ ವಿನಃ, ನಾವು ಪ್ರಸ್ತುತ ಸತ್ಯ ಪರಿಶೀಲನೆಗಾಗಿ ಈ ಕೆಳಗಿನ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತಲಿದ್ದೇವೆ:
ನಾವು ಯಾವುದರ ಸತ್ಯ ಪರಿಶೀಲನೆ ಮಾಡುತ್ತೇವೆ?
ಸುದ್ದಿ ಸಂಸ್ಥೆ ಅಥವಾ ಬೇರೊಂದು ಪ್ರತಿಷ್ಠಾಪಿತ ಸುದ್ದಿ ವಾಹಿನಿಗಯಂತಹ ದ್ವಿತೀಯ ಹಂತದ ಮೂಲಗಳ ಆಧಾರದ ಮೇಲೆ ಬಳಕೆದಾರರಿಂದ ವಿನಂತಿಗಳನ್ನು ಸ್ವೀಕರಿಸಿದರೂ ಸಹ ನಾವು ಮುಖ್ಯವಾಗಿ ಪ್ರಾಥಮಿಕ ಮೂಲವನ್ನೇ ಹುಡುಕುತ್ತೇವೆ. ಸತ್ಯ-ಪರಿಶೀಲನೆಗಾಗಿ ಸುದ್ದಿ ಅಥವಾ ಹೇಳಿಕೆಯನ್ನು ಆಯ್ಕೆ ಮಾಡಿಕೊಂಡ ನಂತರ, ಆ ಸುದ್ದಿ ಅಥವಾ ಹೇಳಿಕೆಯ ಮೂಲವನ್ನು ಪತ್ತೆಹಚ್ಚಲು ನಾವು ಕೂಲಂಕುಷವಾಗಿ ಆನ್‌ಲೈನ್ ಸಂಶೋಧನೆಯನ್ನು ನಡೆಸುತ್ತೇವೆ. ಮೂಲವನ್ನು ದೃಢಪಡಿಸಿಕೊಂಡ ನಂತರ, ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅಧಿಕೃತ ಸುದ್ದಿ ಹೇಳಿಕೆಗಳೊಂದಿಗೆ ಅದರ ಪರಿಶೀಲನೆ ನಡೆಸುತ್ತೇವೆ. ಸಾಮಾನ್ಯವಾಗಿ, ಸತ್ಯ ಪರಿಶೀಲನೆಗಳಿಗೆ ಹೆಚ್ಚಿನ ದೃಢೀಕರಣವನ್ನು ನೀಡಲು ನಾವು ಸಮಸ್ಯೆಗಳ ಕುರಿತು ಸರ್ಕಾರದ ಹೇಳಿಕೆಗಳ ಚಿತ್ರಗಳನ್ನು ಪುನರುತ್ಪಾದಿಸಿದ್ದೇವೆ. ಹೆಚ್ಚುವರಿ ಮತ್ತು ಸಹಕಾರಿ ಸಾಕ್ಷ್ಯಕ್ಕಾಗಿ, ಅಧಿಕೃತ ಪತ್ರಿಕೆಗಳು ಪ್ರಕಟಿಸಿದ ಸುದ್ದಿಗಳ ಲಿಂಕ್‌ಗಳನ್ನು ನೀಡುತ್ತೇವೆ.
ಓದುಗರು ತಾವು ಸ್ವತಃ ಪರಿಶೀಲಿಸಲು ಅನುವು ಮಾಡಿಕೊಡಲು, ನಾವು ಮೂರು ಪ್ರಮುಖ ವಿಭಾಗಗಳಲ್ಲಿ ಲೇಖನಗಳನ್ನು ಪ್ರಕಟಿಸಲಾರಂಭಿಸಿದ್ದೇವೆ — ಮೂಲ, ಕಾರ್ಯವಿಧಾನ ಮತ್ತು ರೇಟಿಂಗ್.
ವಿವರಣೆ:
ನಮ್ಮ ಓದುಗರು ಸುಲಭವಾಗಿ ಸ್ವತಃ ಸತ್ಯ ಪರಿಶೀಲನೆ ಮಾಡಿಕೊಳ್ಳಲು ಅನುವು ಮಾಡಿಕೊಡಲೆಂದು ಚಿತ್ರಗಳು, ಟ್ವೀಟ್‌ಗಳು, ವೆಬ್ ಪುಟಗಳು ಮತ್ತು ಸಂದೇಶಗಳ ಎಲ್ಲಾ ಲಿಂಕ್‌ಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಸಂಗ್ರಹಿಸಲಾಗಿದೆ ಎಂದು ನಾವು ಖಚಿತಪಡಿಸಿದ್ದೇವೆ. ಮೂಲಗಳನ್ನು ತೆಗೆದುಹಾಕಿದ್ದರೂ ಸಹ, ಈ ಸೆರೆಹಿಡಿಯಲಾದ ಚಿತ್ರಗಳು ನಮ್ಮ ಓದುಗರಿಗೆ ಲಭ್ಯವಿರುತ್ತವೆ.
ನಮ್ಮ ಸತ್ಯ-ಪರಿಶೀಲನಾ ಪ್ರಕ್ರಿಯೆಗಾಗಿ ನಾವು ಬಳಸುವ ಕೆಲವು ಆನ್‌ಲೈನ್ ಸಂಶೋಧನಾ ಟೂಲ್ಗಳು ಇಲ್ಲಿವೆ:
- ಗೂಗಲ್ ಹುಡುಕಾಟ, ವಿಶೇಷವಾಗಿ ನಿರ್ದಿಷ್ಟ ಸಮಯದೊಳಗೆ ಕಾಲಾನುಕ್ರಮದ ಹುಡುಕಾಟದ ಸಹಾಯದೊಂದಿಗೆ ನಾವು ಹಿಂದೆ ಪ್ರಕಟವಾದ ಕೆಲವು ಹಳೆಯ ಕಥೆಗಳನ್ನು ಗುರುತಿಸಿ ಘಟನಾವಳಿಗಳಿಗೆ ಹೊಂದಿಸಿ ಪ್ರಸ್ತುತ ನಾವು ಕಂಡುಕೊಂಡ ಅಂಶಗಳನ್ನು ದೃಢೀಕರಿಸಲು ಸಾಧ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಶ್ರೀಲಂಕಾದ ಸುದ್ದಿಯಲ್ಲಿ ಮಾಡಿದಂತೆ ಸತ್ಯ-ಪರಿಶೀಲನೆಗಳನ್ನು ಸಾಬೀತುಪಡಿಸಲು ಪ್ರಕಟಗೊಂಡ ಇ-ಪತ್ರಿಕೆಗಳು ಕಂಡುಬಂದಿವೆ.
- ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ: ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದ ಸಹಾಯದೊಂದಿಗೆ, ನಮ್ಮ ಸತ್ಯ ಪರೀಕ್ಷಕರು ರೈಟ್ ಕ್ಲಿಕ್ ವಿಧಾನವನ್ನು ಬಳಸಿಕೊಂಡು ಯಾವುದೇ ಚಿತ್ರದ ಮೂಲವನ್ನು ಮತ್ತು ಪ್ರಪಂಚದಾದ್ಯಂತ ಪ್ರಕಟವಾದ ಸ್ವರೂಪಗಳಲ್ಲಿ ಅದರ ಹಳೆಯ ಬಳಕೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ರಿವರ್ಸ್ ಇಮೇಜ್ ಹುಡುಕಾಟದಿಂದ ತಪ್ಪಿಸಿಕೊಳ್ಳಲು ಫೋಟೋಗಳನ್ನು ತಿದ್ದಲು ಕಿಡಿಗೇಡಿಗಳು ಫೋಟೋ ಫ್ಲಿಪ್ಪಿಂಗ್ ವಿಧಾನವನ್ನು ಬಳಸಿದ್ದನ್ನೂ ನಾವು ಗುರುತಿಸಲು ಸಾಧ್ಯವಾಗಿದೆ. ರಾಹುಲ್ ಗಾಂಧಿಯವರು ಎಡಗೈಯಿಂದ ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುತ್ತಿರುವುದನ್ನು ತೋರಿಸುವ ಚಿತ್ರದಲ್ಲಿ ಇದನ್ನು ಮಾಡಲಾಗಿತ್ತು.
- ಗೂಗಲ್ ಎಕ್ಸ್‌ಟೆನ್ಶನ್‌ನಲ್ಲಿ ಸಕ್ರಿಯಗೊಳಿಸಲಾಗಿರುವ ಇನ್‌ವಿಡ್ ಪರಿಶೀಲನಾ ಟೂಲ್ ಎಂಬುದು ಫೇಸ್ಬುಕ್/ ಯೂಟ್ಯೂಬ್ / ಇನ್‌ಸ್ಟಾಗ್ರಾಮ್ / ಟ್ವಿಟ್ಟರ್ ಅಥವಾ ಯಾವುದೇ ವೀಡಿಯೊಗಳಲ್ಲಿ ಬಳಸಿರುವ ಯಾವುದೇ ಚಿತ್ರ ಅಥವಾ ವೀಡಿಯೊದ ತ್ವರಿತ ಪರಿಶೀಲನೆಗಾಗಿ ಅಥವಾ ಅವುಗಳ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಮತ್ತೊಂದು ಓಪನ್ ಸೋರ್ಸ್ ವೀಡಿಯೊ / ಚಿತ್ರ ಪರಿಶೀಲನಾ ಟೂಲ್ ಆಗಿದೆ . ಇದು ಬೈದು ಅಥವಾ ಯಾಂಡೆಕ್ಸ್ ಸರ್ಚ್ ಇಂಜಿನ್‌ಗಳನ್ನೂ ಸಹ ಹುಡುಕುತ್ತದೆ.
- ನಮ್ಮ ಸತ್ಯ-ಪರಿಶೀಲನಾ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಅಂಶವೆಂದರೆ ಚಿತ್ರ ತಪಾಸಣೆ. ನಾವು ಸಮಯವನ್ನು ಅಂದಾಜು ಮಾಡಲು ಸಮಯ, ಸ್ಥಳ, ನೆರಳಿನ ಕೋನದಂತಹ ಸುಳಿವುಗಳನ್ನು ಮತ್ತು ಗಾಳಿಯ ದಿಕ್ಕು, ಮಳೆ, ವಾಹನಗಳ ನಂಬರ್ ಪ್ಲೇಟ್‌ಗಳು, ವಾಹನಗಳ ಮೇಲಿನ ಭಾಷೆ, ರಸ್ತೆಗಳಲ್ಲಿನ ಗುರುತಿನ ಫಲಕಗಳು, ವಾಹನದ ತಯಾರಿಕೆ, ಹೋರ್ಡಿಂಗ್‌ಗಳು, ನಾಮಫಲಕಗಳು ಇತ್ಯಾದಿಗಳನ್ನು ಹುಡುಕುತ್ತೇವೆ.
- ನಾವು ನಕಲಿ ಸಂದೇಶಗಳು, ತಿರುಚಿದ ಮಾಹಿತಿ, ತಪ್ಪು ಚಿತ್ರಗಳು, ವೀಡಿಯೊಗಳು ಮತ್ತು ಪದಗಳನ್ನು ಹುಡುಕಲು ಸಾಮಾಜಿಕ ಜಾಲತಾಣಗಳನ್ನು ಪ್ರಮುಖವಾಗಿ ಬಳಸುತ್ತೇವೆ. ಇದಲ್ಲದೆ, ಸಾಮಾನ್ಯ ಜನರಲ್ಲಿ ತಪ್ಪು ಕಲ್ಪನೆಗಳನ್ನು ಪ್ರಚೋದಿಸುವ ಉದ್ದೇಶದಿಂದ, ಸುಳ್ಳು ಸುದ್ದಿಗಳು ಅಥವಾ ಪಕ್ಷಪಾತವುಳ್ಳ ಅಭಿಪ್ರಾಯಗಳು ಅಥವಾ ತಿರುಚಿದ ದೃಷ್ಟಿಕೋನಗಳನ್ನು ಸಕ್ರಿಯವಾಗಿ ಹರಡುವ ಸಾಮಾಜಿಕ ಜಾಲತಾಣ ಬಳಕೆದಾರರ ದೊಡ್ಡ ಪಟ್ಟಿಯನ್ನೇ ನಾವು ಹೊಂದಿದ್ದೇವೆ.
- ಎಲ್ಲಾ ಸುದ್ದಿಗಳಲ್ಲಿ ಸ್ಥಳದಲ್ಲೇ ವರದಿ ಮಾಡುವುದು ಸಾಧ್ಯವಾಗದಿರುವುದರಿಂದ ಮೊದಲಿನ ಮತ್ತು ನಂತರದ ಸ್ಥಳದ ಸತ್ಯವನ್ನು ಪರಿಣಾಮಕಾರಿಯಾಗಿ ಕಂಡುಹಿಡಿಯಲು ಸಾಮಾನ್ಯವಾಗಿ ಗೂಗಲ್ ಅರ್ತ್, ಗೂಗಲ್ ಮ್ಯಾಪ್ಸ್, ರಸ್ತೆ ಚಿತ್ರಗಳು ಸಹಾಯ ಮಾಡುತ್ತವೆ. ವಿಮಾನ ನಿಲ್ದಾಣಗಳು, ನಗರಗಳ ನಡುವಿನ ಅಂತರ, ಅಗತ್ಯವಿರುವ ಸಾರಿಗೆ ವಿಧಾನದಂತಹ ಹಲವಾರು ಸುಳಿವುಗಳನ್ನು ಸಹ ಗೂಗಲ್ ಮ್ಯಾಪ್ಸ್ ಒದಗಿಸುತ್ತದೆ.
ನಮ್ಮ ಗಮನ ಯಾವಾಗಲೂ ಪ್ರಾಥಮಿಕ ಮೂಲದ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಆದರೆ ಕ್ಷೇತ್ರದ ತಜ್ಞರು ಸಂಗ್ರಹಿಸಿದ ಮತ್ತು ದೃಢೀಕರಿಸಿದ ವಿಶ್ವಾಸಾರ್ಹ ಪುರಾವೆಗಳ ಆಧಾರದ ಮೇಲೆ ದ್ವಿತೀಯ ಹಂತದ ಮೂಲವನ್ನು ಅವಲಂಬಿಸಬಹುದಾಗಿದೆ. ಪರಿಚಯ ಬಹಿರಂಗಪಡಿಸಲು ಸಿದ್ಧರಿರುವವರನ್ನು ನಮ್ಮ ಕಥೆಗಳಲ್ಲಿ ಉಲ್ಲೇಖಿಸಲಾಗುತ್ತದೆ (ಸುರಕ್ಷತೆಯ ಆಧಾರದ ಮೇಲೆ ಅನಾಮಧೇಯತೆಯನ್ನು ಬಯಸುವವರ ಹೊರತು). ಈ ನಿಟ್ಟಿನಲ್ಲಿ, ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ್ದ ಸಮಯದಲ್ಲಿ ನಾವು ಹಲವಾರು ವೈದ್ಯರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗಿತ್ತು. ತಮ್ಮ ಗುರುತನ್ನು ಗೌಪ್ಯವಾಗಿರಿಸಬೇಕೆಂಬ ಅವರ ಕೋರಿಕೆಯ ಮೇರೆಗೆ ಅವರ ಹೆಸರನ್ನು ಬಳಸಲು ಸಾಧ್ಯವಾಗದಿದ್ದಾಗ, ನಮ್ಮ ನಿರ್ಧಾರಗಳನ್ನು ಬಲಪಡಿಸಲು ನಾವು ಇತರ ಸಾಕ್ಷ್ಯಾಧಾರಗಳನ್ನು ಬಳಸುತ್ತಿದ್ದೆವು.
ಅಗತ್ಯವಿದ್ದಾಗ ಗಣ್ಯರು ಅಥವಾ ತಜ್ಞರು ಮತ್ತು ಅಧಿಕಾರಿಗಳನ್ನು ಅವರ ಅಭಿಪ್ರಾಯಗಳಿಗಾಗಿ ಸಂಪರ್ಕಿಸಲು ನಾವು ನಮ್ಮ ತಂಡವನ್ನು ಪ್ರೋತ್ಸಾಹಿಸುತ್ತೇವೆ. ಅಷ್ಟೇ ಅಲ್ಲದೆ, ಸುದ್ದಿ ಅಥವಾ ಸಾಮಾಜಿಕ ಜಾಲತಾಣದಳ ಸಂದೇಶಗಳಲ್ಲಿ ಬಳಸಿದ ವಾಸ್ತವಾಂಶಗಳನ್ನು ಪರಿಶೀಲಿಸಲು ನಾವು ಧಾರ್ಮಿಕ ಸಂಸ್ಥೆಗಳು ಮತ್ತು ಲಾಭರಹಿತ ಸಂಶೋಧನಾ ಸಂಸ್ಥೆಗಳನ್ನು ಸಂಪರ್ಕಿಸುತ್ತೇವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಿಂದ, ಸುದ್ದಿಗಳನ್ನು ಹೋಲಿಸಿ ಸತ್ಯವನ್ನರಿಯುವ ಸಲುವಾಗಿ ನಾವು ವೈದ್ಯರು ಮತ್ತು ಆಯುರ್ವೇದ ವೈದ್ಯರೊಂದಿಗೆ ನಿಕಟ ಸಂಪರ್ಕವನ್ನು ಸ್ಥಾಪಿಸಿದ್ದೇವೆ.
ಎಲ್ಲಾ ಮೂಲಗಳು ಮತ್ತು ಚಿತ್ರಗಳ ಸರಿಯಾದ ಲಿಂಕ್‌ಗಳನ್ನು ಒದಗಿಸುವ ಮೂಲಕ ನಾವು ಸ್ಥಾಪಿತ ಆನ್‌ಲೈನ್ ಪತ್ರಿಕೋದ್ಯಮ ಮಾನದಂಡಗಳನ್ನು ಅನುಸರಿಸುತ್ತೇವೆ ಮತ್ತು ನಮ್ಮ ಸತ್ಯ-ಪರಿಶೀಲನಾ ಪ್ರಕ್ರಿಯೆಯನ್ನು ಎತ್ತಿಹಿಡಿಯಲು ನಾವು ಸಾಮಾಜಿಕ ಮಾಧ್ಯಮ ಮೂಲಗಳು ಅಥವಾ ಸ್ಕ್ರೀನ್ ಶಾಟ್‌ಗಳನ್ನು ಅಳವಡಿಸಿಕೊಳ್ಳುತ್ತೇವೆ. ನಮ್ಮ ಸತ್ಯ ಪರಿಶೀಲನೆಗಳನ್ನು ನಮ್ಮ ಓದುಗರು ಸುಲಭವಾಗಿ ಪುನರಾವರ್ತಿಸಲು ಅನುವುಮಾಡಿಕೊಡಲು, ಚಿತ್ರಗಳು, ಟ್ವೀಟ್‌ಗಳು, ವೆಬ್ ಪುಟಗಳು ಮತ್ತು ಸಂದೇಶಗಳ ಲಿಂಕ್ ಗಳನ್ನೆಲ್ಲಾ ಆನ್‌ಲೈನ್ ಆರ್ಕೈವ್ ಆದ www.archive.orgನಲ್ಲಿ ಸಂಗ್ರಹಿಸಲಾಗಿದೆ ಎಂದು ನಾವು ಖಚಿತಪಡಿಸುತ್ತೇವೆ.
ಮತ್ತು ಮರು-ಪ್ರಕಟಿಸಿ ನಂತರ ನವೀಕರಿಸಿದ ಸುದ್ದಿಯಲ್ಲಿ ಮಾಡಿದ ಬದಲಾವಣೆಗಳು ಅಥವಾ ತಿದ್ದುಪಡಿಗಳ ಕುರಿತು ಮಾಹಿತಿಯನ್ನು ಓದುಗರಿಗಾಗಿ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇವೆ.
————–