CODE OF PRINCIPLES
ಡಿಜಿಟೈ ಇಂಡಿಯಾ (www.digiteye.in) ಇದ್ದ ವಾಸ್ತವಾಂಶಗಳನ್ನು ಇದ್ದಂತೆಯೇ ಓದುಗರಿಗಾಗಿ ತರಲು ಮತ್ತವರು ಸಾಮಾಜಿಕ ಮಾಧ್ಯಮ ಅಥವಾ ಇನ್ನಿತರ ಆನ್‌ಲೈನ್ ಮಾಧ್ಯಮಗಳ ಮೂಲಕ ಡಿಜಿಟಲ್ ರೂಪದಲ್ಲಿ ಅವರಿಗೆ ನೀಡಲಾಗುವ ಎಲ್ಲಾ ಮಾಹಿತಿಯನ್ನೂ ನಂಬುವುದನ್ನು ತಡೆಯುವ ಸಲುವಾಗಿ ಮಾಧ್ಯಮಗಳ ನೈತಿಕತೆಯ ಉನ್ನತ ಗುಣಮಟ್ಟವನ್ನು ಅನುಸರಿಸಲು ಬದ್ಧವಾಗಿದೆ. ಸತ್ಯ ಎಂದಿಗೂ ಪವಿತ್ರ ಮತ್ತು ಅದರ ಸಿಂಧುತ್ವ ಶಾಶ್ವತವಾಗಿರಬೇಕು. ನಮ್ಮ ತತ್ವಗಳ ಸಂಹಿತೆ ಹೀಗಿದೆ:
1. ಪಕ್ಷಾತೀತತೆ ಮತ್ತು ನ್ಯಾಯಸಮ್ಮತತೆ ಎಡೆಗೆ ನಮ್ಮ ಬದ್ಧತೆ
ಡಿಜಿಟೈ ಇಂಡಿಯಾ (www.digiteye.in) ರಾಯಿಟರ್ಸ್ ಮತ್ತಿತರ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ಅನುಭವಿ ಮಾಧ್ಯಮ ವೃತ್ತಿಪರರು ನಿರ್ವಹಿಸುತ್ತಿರುವ ಒಂದು ಸ್ವತಂತ್ರ ಡಿಜಿಟಲ್ ವೇದಿಕೆ. ಸುದ್ದಿಯಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುವ ಯಾವುದೇ ವೈಯಕ್ತಿಕ ದೃಷ್ಟಿಕೋನದ ಅಪಾಯವನ್ನು ತಪ್ಪಿಸಲು ಪ್ರತಿಯೊಂದು ಸತ್ಯ ಪರಿಶೀಲನೆಯನ್ನು ಹಲವಾರು ಬಾರಿ ಪರೀಕ್ಷಿಸಲಾಗುತ್ತದೆ. ಯಾವುದೇ ಹಿತಾಸಕ್ತಿಯ ಸಂಘರ್ಷದ ಸಂಭಾವನೆಯನ್ನು ತಪ್ಪಿಸುವ ಸಲುವಾಗಿ ತಂಡದ ಸದಸ್ಯರು ಯಾವುದೇ ರಾಜಕೀಯ ಪಕ್ಷ ಅಥವಾ ಅವುಗಳನ್ನು ಸಮರ್ಥಿಸುವ ಯಾವುದೇ ಸಂಸ್ಥೆಯೊಂದಿಗೆ ಸಂಬಂಧ ಹೊಂದಲು ಅನುಮತಿ ಇರುವುದಿಲ್ಲ.
ನಮ್ಮ ಎಲ್ಲಾ ಸಿಬ್ಬಂದಿಯ ಕಡೆಯಿಂದ ಪಕ್ಷಾತೀತತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಮತ್ತು ಯಾವುದೇ ಹಿತಾಸಕ್ತಿ ಸಂಘರ್ಷದ ಸಂಭಾವನೆಯನ್ನು ತಪ್ಪಿಸುವ ಸಲುವಾಗಿ ಅವರು ಕಟ್ಟುನಿಟ್ಟಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ಅವುಗಳನ್ನು ಸಮರ್ಥಿಸುವ ಯಾವುದೇ ಗುಂಪಿನೊಂದಿಗೆ ಸಂಬಂಧ ಹೊಂದಿರಬಾರದೆಂದು ಬಯಸುತ್ತೇವೆ.
ಡಿಜಿಟೈ ಇಂಡಿಯಾದ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ ರಾಜಕೀಯ ಪ್ರಚಾರಗಳು, ರಾಜಕೀಯ ಪಕ್ಷದ ಚಟುವಟಿಕೆಗಳು ಅಥವಾ ರಾಜಕೀಯ ಸಮರ್ಥನೆ ಸಂಸ್ಥೆಗಳಿಗೆ ದೇಣಿಗೆ ನೀಡುವುದರಿಂದ ಅಥವಾ ಭಾಗವಹಿಸುವುದರಿಂದ ಹೊರತುಪಡಿಸಲಾಗುತ್ತದೆ. ಅವರು ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದು, ಯಾವುದೇ ಚುನಾವಣೆಯ ಸಮಯದಲ್ಲಿ ಮತ ಚಲಾಯಿಸಲು ಅಥವಾ ಚಲಾಯಿಸದಿರಲು ನೌಕರರನ್ನು ವಿನಂತಿಸುವುದು, ಯಾವುದೇ ರೀತಿಯ ರಾಜಕೀಯ ದೃಷ್ಟಿಕೋನವನ್ನು ಬಿಂಬಿಸುವ ಬ್ಯಾಡ್ಜ್‌ಗಳು, ಬಟನ್‌ಗಳು ಅಥವಾ ವೇಷಭೂಷಣಗಳನ್ನು ಧರಿಸುವುದು, ಮುದ್ರಣ, ಡಿಜಿಟಲ್ ಅಥವಾ ಯಾವುದೇ ಇತರ ರೀತಿಯ ರಾಜಕೀಯ ಸಾಹಿತ್ಯವನ್ನು ಹಂಚಿಕೊಳ್ಳುವುದು, ಯಾವುದೇ ರೀತಿಯಲ್ಲಿ ರಾಜಕೀಯ ಸಾಹಿತ್ಯ ಅಥವಾ ರಾಜಕೀಯ ದೃಷ್ಟಿಕೋನಗಳನ್ನು ಮುದ್ರಿಸಲು, ನಕಲು ಮಾಡಲು ಅಥವಾ ಸಂವಹನ ಮಾಡಲು ಕಂಪನಿಯ ಉಪಕರಣಗಳನ್ನು ಬಳಸುವುದು, ಪ್ರತಿಭಟನೆಗಳಲ್ಲಿ ಹಾಜರಾಗುವುದು ಅಥವಾ ರಾಜಕೀಯ ಕಾರಣಕ್ಕಾಗಿ ಅಥವಾ ವಿರುದ್ಧವಾಗಿ ಪ್ರತಿಭಟಿಸಲು ಜನರನ್ನು ಒತ್ತಾಯಿಸುವುದನ್ನು ತಡೆಯಲಾಗಿದೆ. ಕಂಪನಿಗೆ ಸೇರುವ ಸಮಯದಲ್ಲಿ ನಮ್ಮ ಸಿಬ್ಬಂದಿ ಸದಸ್ಯರು ಪಕ್ಷಾತೀತ-ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. ಈ NPA ಒಪ್ಪಂದದ ಪ್ರತಿಯನ್ನು ಇಲ್ಲಿ ನೋಡಿ.
ಸತ್ಯಗಳನ್ನು ಪರಿಶೀಲಿಸಲು ಮತ್ತು ನಮ್ಮ ಪಾರದರ್ಶಕ ಕಾರ್ಯವಿಧಾನ ಮತ್ತು ಕೆಲಸದ ರೀತಿಯ ಬಗ್ಗೆ ಪ್ರತಿಕ್ರಿಯೆ ನೀಡಲು ನಾವು ನಮ್ಮ ಓದುಗರನ್ನು ಪ್ರೋತ್ಸಾಹಿಸುತ್ತೇವೆ. ನಾವು ತಪ್ಪೆಂದು ಸಾಬೀತಾದಾಗಲೆಲ್ಲಾ ನಾವು ತಿದ್ದುಪಡಿಗಳನ್ನು ಮಾಡಲು ಮುಕ್ತರಾಗಿದ್ದೇವೆ. ವೆಬ್ ಸೈಟ್‌ನ ಪ್ರತಿ ಪುಟದಲ್ಲಿ ಗೋಚರಿಸುವ ಸಂಪರ್ಕ/ ಉತ್ತರ ಒದಗಿಸಿ ಲಿಂಕ್‌ಗಳ ಮೂಲಕ ಇ-ಮೇಲ್ ಮೂಲಕ ಯಾವುದೇ ಸಂಪಾದಕೀಯ ಸಿಬ್ಬಂದಿ ಸದಸ್ಯರನ್ನು ತಲುಪಬಹುದು.
2. ಮೂಲಗಳ ಪಾರದರ್ಶಕತೆಗೆ ನಮ್ಮ ಬದ್ಧತೆ:
ಡಿಜಿಟೈ ಇಂಡಿಯಾ ಎಲ್ಲಾ ಹೇಳಿಕೆಗಳನ್ನು ಸಮಾನ ಶಕ್ತಿಯೊಂದಿಗೆ ಪರಿಶೀಲಿಸುತ್ತದೆ ಮತ್ತು ಕಂಡುಕೊಂಡ ಅಂಶಗಳನ್ನು ಓದುಗರು ಸ್ವತಃ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಸಂಸ್ಥೆಯು ಎಲ್ಲಾ ವಿವರಗಳು, ಮೂಲಗಳ ಲಿಂಕ್‌ಗಳನ್ನು ಒದಗಿಸುತ್ತದೆ ಮತ್ತು ಚಿತ್ರ-ಆಧಾರಿತ ಪರಿಶೀಲಿಸಬಹುದಾದ ವಾಸ್ತವಾಂಶಗಳನ್ನು ಸಹ ಹೊಂದಿರುತ್ತದೆ. ನಾವು ನೀಡಿದ ಸತ್ಯಗಳನ್ನು ಪರಿಶೀಲಿಸಲು ಅಥವಾ ಅವುಗಳನ್ನು ನಿರಾಕರಿಸುವ ಸಲುವಾಗಿ ಇವುಗಳನ್ನು ಪುನರಾವರ್ತಿಸಿಯೂ ನೋಡಬಹುದು. ಅಂತೆಯೇ, ನಾವು ಮಾಧ್ಯಮ ನೈತಿಕತೆಯ ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಯುತ ಮತ್ತು ಪಾರದರ್ಶಕ ಪ್ರಸ್ತುತಿಯನ್ನು ಅನುಸರಿಸುತ್ತೇವೆ. ಡಿಜಿಟೈ ಇಂಡಿಯಾ ಯಾವುದೇ ಪಕ್ಷಪಾತವಿಲ್ಲದೆ ಪ್ರತಿ ಸತ್ಯ ಪರಿಶೀಲನೆಗೆ ಕಟ್ಟುನಿಟ್ಟಾದ ಮತ್ತು ಪ್ರಮಾಣೀಕೃತ ಕಾರ್ಯವಿಧಾನವನ್ನು ಅನುಸರಿಸುತ್ತದೆ.
ಪ್ರತಿ ವಾಸ್ತವಾಂಶವೂ ಸದೃಢ ಮತ್ತು ಪ್ರಾಯೋಗಿಕ ಪುರಾವೆಗಳಿಂದ ಬೆಂಬಲಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ, ಪ್ರತಿ ಸುದ್ದಿಯು ಸತ್ಯ-ಪರೀಕ್ಷಕರಿಂದ ಸಂಪಾದಕರವರೆಗೆ ಹಲವಾರು ಕಣ್ಣುಗಳ ಮೂಲಕ ಹಾದು ಹೋಗುತ್ತದೆ. ಯಾವುದೇ ವೈಯಕ್ತಿಕ ದೃಷ್ಟಿಕೋನವು ಸುದ್ದಿಯಲ್ಲಿ ಸ್ಥಾನವನ್ನು ಕಂಡುಕೊಳ್ಳುವ ಅಪಾಯವನ್ನು ತಪ್ಪಿಸಲು ಇಡೀ ತಂಡವು ಹೊರಬರುವ ಎಲ್ಲಾ ಸುದ್ದಿಗಳ ಮೇಲೆ ಕಣ್ಣಿಡುತ್ತದೆ. ಒಂದೊಮ್ಮೆ ತಪ್ಪು ಎಂದು ಸಾಬೀತಾದರೆ, ಅದನ್ನು ಸರಿಪಡಿಸಲು ಮತ್ತು ನಮ್ಮ ತಿದ್ದುಪಡಿಗಳ ನೀತಿಯ ಭಾಗವಾಗಿಸಲು ನಾವು ಹಿಂಜರಿಯುವುದಿಲ್ಲ.
3. ನಿಧಿ ಮತ್ತು ಸಂಘಟನೆಯ ಪಾರದರ್ಶಕತೆಗೆ ಬದ್ಧತೆ:
ಡೀಜಿಟೈ ಇಂಡಿಯಾ (www.digiteye.in) ಉಪಕ್ರಮವು 2014ರಿಂದ ಭಾರತ ಸರ್ಕಾರ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟ ಸಾಫ್ಟ್ ಮೀಡಿಯಾಹಬ್ ಎಲ್.ಎಲ್.ಪಿ.ಯ ನಿರ್ದೇಶಕರ ಸ್ವಯಂ-ಹೂಡಿಕೆಯನ್ನು ಮಾತ್ರ ಹೊಂದಿದೆ, ಮತ್ತು ನಾವು ಯಾವುದೇ ಇತರ ಸಂಸ್ಥೆ ಅಥವಾ ವ್ಯಕ್ತಿಯಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ. ಸ್ವತಂತ್ರ ಮಾಧ್ಯಮದ ನೈತಿಕತೆಯ ಮೌಲ್ಯಗಳನ್ನು ಎತ್ತಿಹಿಡಿಯುವೆಡೆಗೆ ತಂಡವು ಬದ್ಧವಾಗಿದೆ. ಯಾವುದೇ ಸಂಸ್ಥೆಯು ನಮ್ಮ ಹೂಡಿಕೆಯ ಮಾದರಿಯನ್ನು ಪರಿಶೀಲಿಸಲು ಮುಕ್ತತೆ ಮತ್ತು ಪಾರದರ್ಶಕತೆ ಒದಗಿಸಲು ನಾವು ಸಮಾನವಾಗಿ ಬದ್ಧರಾಗಿದ್ದೇವೆ. ನಮ್ಮ ಸಂಸ್ಥೆಯ ರಚನೆ ಮತ್ತು ನಮ್ಮ ಕಾನೂನು ಸ್ಥಾನಮಾನದ ಬಗ್ಗೆ ನಾವು ಪಾರದರ್ಶಕವಾಗಿದ್ದೇವೆ.
4.ಕಾರ್ಯವಿಧಾನದ ಪಾರದರ್ಶಕತೆಗೆ ನಮ್ಮ ಬದ್ಧತೆ:
ನಮ್ಮ ವಾಸ್ತವ ಪರಿಶೀಲನೆಗಳಿಗೆ ಸಂಬಂಧಿಸಿದಂತೆ ವಿಷಯದ ಆಯ್ಕೆಯ ಪ್ರಕ್ರಿಯೆ, ಸಂಶೋಧನೆ, ಬರವಣಿಗೆ, ಸಂಪಾದನೆ, ಪ್ರಕಟಣೆ ಮತ್ತು ತಿದ್ದುಪಡಿಯ ನಮ್ಮ ವಿಧಾನವನ್ನು ನಾವು ವಿವರವಾಗಿ ವಿವರಿಸಿದ್ದೇವೆ. ಇಮೇಲ್ ಮೂಲಕ ಅಥವಾ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಲತಾಣಗಳ ಮೂಲಕ ನಮಗೆ ಸತ್ಯವನ್ನು ಪರಿಶೀಲಿಸಬೇಕಾದ ಹೇಳಿಕೆಗಳನ್ನು ಕಳುಹಿಸಲು ನಾವು ನಮ್ಮ ಓದುಗರನ್ನು ಪ್ರೋತ್ಸಾಹಿಸುತ್ತೇವೆ. ನಮ್ಮ ಕಾರ್ಯವಿಧಾನದ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಕಾರ್ಯವಿಧಾನವನ್ನು ನೋಡಿ.
5. ಮುಕ್ತ ಮತ್ತು ಪ್ರಾಮಾಣಿಕ ತಿದ್ದುಪಡಿಗಳಿಗೆ ನಮ್ಮ ಬದ್ಧತೆ::
ಸತ್ಯವನ್ನು ಹೊರತರುವುದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದ್ದು, ನಮ್ಮ ಪ್ರಯತ್ನಗಳಲ್ಲಿ ತಪ್ಪುಗಳು ಉಂಟಾಗಬಹುದು. ತಪ್ಪಾದಾಗಲೆಲ್ಲ ಅದನ್ನು ಮುಕ್ತವಾಗಿ ಹೇಳುತ್ತೇವೆ ಮತ್ತು ತಪ್ಪುಗಳನ್ನು ಸರಿಪಡಿಸಲು ಮುಂದಾಗುತ್ತೇವೆ. ನಾವು ತಿದ್ದುಪಡಿಯ ಬಗ್ಗೆ ನಮ್ಮ ಓದುಗರಿಗೆ ತಕ್ಷಣವೇ ತಿಳಿಸುತ್ತೇವೆ ಮತ್ತು ಟ್ವಿಟರ್ ಮತ್ತು ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಾಸ್ತವವನ್ನು ಇರಿಸುತ್ತೇವೆ. ಓದುಗರು ಮತ್ತು ಸಾರ್ವಜನಿಕರಿಂದ ರಚನಾತ್ಮಕ ಪ್ರತಿಕ್ರಿಯೆ ಮತ್ತು ಟೀಕೆಗಳಿಗೆ ನಾವು ಯಾವಾಗಲೂ ಮುಕ್ತರಾಗಿದ್ದೇವೆ. ನಾವು ನಮ್ಮ ತಿದ್ದುಪಡಿಗಳ ನೀತಿಗೆ ಅನುಗುಣವಾಗಿ ನಮ್ಮ ತಿದ್ದುಪಡಿಗಳನ್ನು ಲೇಖನದೊಳಗೆ ಎದ್ದುಕಾಣುವಂತೆ ಪ್ರಕಟಿಸುತ್ತೇವೆ ಮತ್ತು ಓದುಗರು ಸರಿಪಡಿಸಿದ ಆವೃತ್ತಿಯನ್ನು ನೋಡುವುದಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಹಾಗೆಯೇ, ಈ ಎಲ್ಲಾ ತಿದ್ದುಪಡಿಗಳನ್ನು ನಮ್ಮ ತಿದ್ದುಪಡಿ ಪುಟದಲ್ಲಿ ಪಟ್ಟಿ ಮಾಡಲಾಗಿರುತ್ತದೆ.