ಹೇಳಿಕೆ/Claim:ರಾಹುಲ್ ಗಾಂಧಿಯವರು ಬಿಜೆಪಿ ಚಿಹ್ನೆ ಇರುವ ಟೀ ಶರ್ಟ್ ಧರಿಸಿರುವ ಚಿತ್ರವನ್ನು ಆತ ಬಿಜೆಪಿ ಏಜೆಂಟ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಕಡೆನುಡಿ/Conclusion: ಸುಳ್ಳು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬಿಜೆಪಿ ಏಜೆಂಟ್ ಎಂದು ತಪ್ಪಾಗಿ ತೋರಿಸಲು ಅವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.
ರೇಟಿಂಗ್: ದಾರಿತಪ್ಪಿಸುವ ಸುದ್ದಿ—
ಬೆನ್ನಿನ ಭಾಗದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚಿಹ್ನೆ ಇರುವ ಟೀ ಶರ್ಟ್ ಅನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಧರಿಸಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
हमने तो पहले ही कहा था की यह राहुल गांधी बीजेपी का एजेंट है, आज हमने राहुल गांधी को रंगे हाथो पकड़ लिया है 😋 pic.twitter.com/pUfd16UnLt
— Harish Mali (@HarishMali06) January 15, 2024
ಅದನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ. ಜನವರಿ 14, 2024ರಂದು ಮಣಿಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ್ ಯಾತ್ರಾ’ ಪ್ರಾರಂಭವಾದಾಗ ಈ ಹೇಳಿಕೆ ಮೂಡಿಬಂತು. ಹಿಂದಿಯಲ್ಲಿ ಶೀರ್ಷಿಕೆ ಹೀಗಿದೆ, “हमने तो पहले ही कहा था की यह राहुल गांधी बीजेपी का एजेंट है, आज हमने राहुल गांधी को रंगे हाथो पकड़ लिया है” [ಅದರ ಅನುವಾದ ಇಲ್ಲಿದೆ: “ಈ ರಾಹುಲ್ ಗಾಂಧಿ ಬಿಜೆಪಿಯ ಏಜೆಂಟ್ ಎಂದು ನಾವು ಮೊದಲೇ ಹೇಳಿದ್ದೆವು, ಇಂದು ನಾವು ರಾಹುಲ್ ಗಾಂಧಿಯನ್ನು ರೆಡ್ ಹ್ಯಾಂಡ್ ಕೃತ್ಯದಲ್ಲೇ ಹಿಡಿದಿದ್ದೇವೆ.]
FACT CHECK
ರಾಹುಲ್ ಗಾಂಧಿಯವರು ಬಿಜೆಪಿ ಚಿಹ್ನೆಯಿರುವ ಟೀ ಶರ್ಟ್ ಧರಿಸಿರುವ ಚಿತ್ರ ನಮಗೆ ವಿಚಿತ್ರವೆಂದು ಕಂಡಿತು, ಹಾಗಾಗಿ ಹಿನ್ನೆಲೆಯನ್ನು ಬಳಸಿ ಮೂಲ ಚಿತ್ರವನ್ನು ಪರಿಶೀಲಿಸಿದೆವು. ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದೊಂದಿಗೆ, ಮೂಲ ಚಿತ್ರವನ್ನು ಕಾಂಗ್ರೆಸ್ ಪಕ್ಷದ ವಕ್ತಾರರಾದ ಸುಪ್ರಿಯಾ ಶ್ರಿನಾತೆಯವರ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು ಎಂದು ಕೊನೆಗೆ ನಾವು ಕಂಡುಕೊಂಡೆವು.
ಶ್ರೀನಾತೆಯವರು ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಆಕೆ ಜನವರಿ 14, 2024ರಂದು ಹಿಂದಿಯ ಈ ಮುಂದಿನ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು, “जब ईस्ट से वेस्ट की यात्रा की बात हुई थी – तो मैंने कहा कि यह यात्रा सिर्फ़ और सिर्फ़ मणिपुर से शुरू हो सकती है” [ಅನುವಾದ ಹೀಗಿದೆ: ನಾವು ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣಿಸುವ ಬಗ್ಗೆ ಮಾತನಾಡಿದಾಗ – ಈ ಯಾತ್ರೆಯು ಮಣಿಪುರದಿಂದಲೇ ಪ್ರಾರಂಭವಾಗಬೇಕು ಎಂದು ನಾನು ಹೇಳಿದೆ.]
ಆದರೆ ಈ ಚಿತ್ರವನ್ನು ಬದಲಾಯಿಸಿ, ರಾಹುಲ್ ಗಾಂಧಿಯವರ ಟೀ ಶರ್ಟ್ನಲ್ಲಿ ಬಿಜೆಪಿ ಚಿಹ್ನೆಯನ್ನು ಮಾರ್ಫ್ ಮಾಡಲಾಗಿದೆ.
ಇದನ್ನೂ ಓದಿ:
ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ
ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ
One comment
Pingback: ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿ