Claim/ಹೇಳಿಕೆ: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ವಿಶ್ವಕಪ್ ಪಂದ್ಯಾಟದ ಸಮಯದಲ್ಲಿ ಭಾರಿ ಜನಸಮೂಹವು ಹನುಮಾನ್ ಚಾಲೀಸಾ ಪಠಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.Conclusion/ಕಡೆನುಡಿ: ಸುಳ್ಳು, ವೀಡಿಯೊದ ಧ್ವನಿ ಟ್ರ್ಯಾಕ್ ಅನ್ನು ಬದಲಾಯಿಸಿ ಹನುಮಾನ್ ಚಾಲೀಸಾ ಬಳಸಲಾಗಿದೆ.
ರೇಟಿಂಗ್:ತಪ್ಪು ನಿರೂಪಣೆ
Fact Check ವಿವರಗಳು:
ನವೆಂಬರ್ 19, 2023ರ ಭಾನುವಾರದಂದು ಅಹಮದಾಬಾದ್ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಾಟದ ಕುರಿತಾದ ಅಬ್ಬರದ ಪ್ರಚಾರದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೊಗಳು ಮತ್ತು ಮೀಮ್ಗಳು ವೈರಲ್ ಆಗಲಾರಂಭಿಸಿದವು. ಅಂತಹ ಒಂದು ವೀಡಿಯೊ ಕ್ಲಿಪ್ ನಲ್ಲಿ ಬೃಹತ್ ಸಭೆಯೊಂದನ್ನು ಕಾಣಬಹುದು. ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಂದರ್ಭದಲ್ಲಿ ಸುಮಾರು 1.5 ಲಕ್ಷ ಜನರು ಹನುಮಾನ್ ಚಾಲಿಸಾ ಪಠಣ (ಹನುಮಂತನ ಆಶೀರ್ವಾದವನ್ನು ಕೋರುವ ಪ್ರಾರ್ಥನೆ) ಮಾಡಲಾರಂಭಿಸಿದರು ಎಂಬ ಹೇಳಿಕೆಯನ್ನು ಈ ವೀಡಿಯೊ ಹೊಂದಿದೆ.
1.5 lakh people chanting Hanuman Chalisa will surely give you goosebumps 🔥🔥 pic.twitter.com/3gFwNdphiV
— We Hindu (@SanatanTalks) November 20, 2023
ಇದು ವೈರಲ್ ಆಗಿದ್ದು ಟಿವಿ ವಾಹಿನಿಗಳೂ ಸಹ ತಮ್ಮ ವರದಿಯಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಕ್ಲಿಪ್ ಅನ್ನು ತೋರಿಸಿವೆ. ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಿ.
FACT CHECK
ಈ ವೈರಲ್ ಪೋಸ್ಟ್ ವಾಟ್ಸಾಪ್ನಲ್ಲಿ ನಮ್ಮನ್ನು ತಲುಪಿದಾಗ, ನಾವು ಸಾಮಾಜಿಕ ಜಾಲತಾಣಗಳನ್ನು ಹುಡುಕಿದೆವು ಮತ್ತು ಈ ವೀಡಿಯೊವನ್ನು ಟ್ವಿಟರ್ನಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ನಮ್ಮ ಅರಿವಿಗೆ ಬಂತು.
ಕ್ಲಿಪ್ನಿಂದ ಕೆಲವು ಪ್ರಮುಖ ಫ್ರೇಮ್ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ, ಕ್ರಿಕೆಟ್ ಪಂದ್ಯ ನಡೆದ ಕ್ರೀಡಾಂಗಣದಲ್ಲಿಯೇ ಗಾಯಕ ದರ್ಶನ್ ರಾವಲ್ ಪ್ರದರ್ಶನ ನೀಡುತ್ತಿರುವ ಒಂದು ವೀಡಿಯೊ ನಮಗೆ ದೊರಕಿತು. ಕೆಳಗಿನ ಚಿತ್ರದಲ್ಲಿ ಗುರುತಿಸಲಾದಂತೆ, ಅದರಲ್ಲಿ ಆ ಗಾಯಕರನ್ನೇ ಪ್ರಮುಖವಾಗಿ ತೋರಿಸಲಾಗಿದೆ.
ಗೂಗಲ್ ಹುಡುಕಾಟದಲ್ಲಿ ಈ ಪ್ರದರ್ಶನವನ್ನು ಹುಡುಕಿದಾಗ, ಗಾಯಕ ದರ್ಶನ್ ರಾವಲ್ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಕಂಡುಬರುವ ಬೃಹತ್ ಪ್ರಮಾಣದ ಪ್ರೇಕ್ಷಕರಿಗಾಗಿ ಪ್ರದರ್ಶನ ನೀಡುತ್ತಿರುವುದನ್ನು ಫಲಿತಾಂಶಗಳು ತೋರಿಸಿದವು. ಈ ಪಂದ್ಯವನ್ನು ಅಕ್ಟೋಬರ್ 14, 2023ರಂದು ನಡೆಸಲಾಗಿತ್ತು ಮತ್ತು ವೀಡಿಯೊವನ್ನು ಯುಟ್ಯೂಬ್ನಲ್ಲಿ ಅಕ್ಟೋಬರ್ 16, 2023ರಂದು ಅಪ್ಲೋಡ್ ಮಾಡಲಾಗಿತ್ತು. ಮೂಲ ವೀಡಿಯೊವನ್ನು ಇಲ್ಲಿ ಕೂಡ ನೋಡಿ.
ವೀಡಿಯೋವನ್ನು ಇಲ್ಲಿ ಕೂಡ ಕಾಣಬಹುದು. ಅಲ್ಲಿ ಗಾಯಕರು ಹನುಮಾನ್ ಚಾಲೀಸಾ ಪಠಿಸುತ್ತಿರಲಿಲ್ಲ. ಆತ ವಿಶ್ವಕಪ್ 2023ರ ಪಂದ್ಯಗಳ ಅಂಗವಾಗಿ ಅದೇ ಕ್ರೀಡಾಂಗಣದಲ್ಲಿ ಅಕ್ಟೋಬರ್ 14, 2023ರಂದು ನಡೆದ ಭಾರತ-ಪಾಕಿಸ್ತಾನ ಪಂದ್ಯದ ವಿರಾಮದ ಸಮಯದಲ್ಲಿ ಪ್ರದರ್ಶನ ನೀಡುತ್ತಿದ್ದರು. ಇದನ್ನು ಕೆಳಗಿನ ಇನ್ಸ್ಟಾಗ್ರಾಮ್ ಪೋಸ್ಟ್ ಮತ್ತಷ್ಟು ಪುಷ್ಠೀಕರಿಸುತ್ತದೆ:
View this post on Instagram
ಆದ್ದರಿಂದ, 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸುತ್ತಿರುವಂತೆ ಅನ್ನಿಸಲು ವೀಡಿಯೊದ ಧ್ವನಿಯ ಟ್ರ್ಯಾಕ್ ಅನ್ನು ಬದಲಾಯಿಸಲಾಗಿದೆ.
ಇದನ್ನೂ ಓದಿ:
ಇಲ್ಲ, ರಾಹುಲ್ ಗಾಂಧಿಯವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಘೋಷಿಸಿಲ್ಲ