ಹೇಳಿಕೆ/Claim: ಬೆಂಜಮಿನ್ ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಬಂಧಿಸುವುದಾಗಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಜ್ಞೆ ಮಾಡಿದ್ದಾರೆ.
ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ಈ ಮಾತನ್ನು 2024 ರ ನವೆಂಬರ್‌ನಲ್ಲಿ ಹೇಳಿದವರು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ.
ರೇಟಿಂಗ್/Rating: ದಾರಿತಪ್ಪಿಸುವಂತಿದೆ —
ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೆತನ್ಯಾಹು ಇಟಲಿಗೆ ಕಾಲಿಟ್ಟರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘_MegaPolitics’ “ದೇಶದೊಳಗೆ ಪ್ರವೇಶಿಸಿದರೆ ನೆತನ್ಯಾಹು ಅವರನ್ನು ಬಂಧಿಸುವುದಾಗಿ ಇಟಲಿಯ ಪ್ರಧಾನಿ ಮೆಲೋನಿ ಹೇಳುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ಅಂತಹ ಒಂದು ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 13, 2025 ರಂದು ಮಾಡಿದ ಪೋಸ್ಟ್ ಸುಮಾರು 1.3 ಮಿಲಿಯ ವೀಕ್ಷಣೆಗಳನ್ನು ಗಳಿಸಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ:
Breaking:
Italian PM meloni says she will arrest Netanyahu if he enters the country. pic.twitter.com/2QUGjhdg4N
— Mega-Politics (@_MegaPolitics) September 13, 2025
ಮತ್ತೊಬ್ಬ X ಬಳಕೆದಾರರು ಅದೇ ಹೇಳಿಕೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ:
Breaking:
Italian PM meloni says she will arrest Netanyahu if he enters the country. pic.twitter.com/FC5Bvz9dz7
— Middle East Spectator (@Middle_East_S) September 14, 2025
ಇತರ ಬಳಕೆದಾರರು ಸಹ ಅಂತಹದ್ದೇ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿರುವುದಾಗಿ ಕಂಡುಕೊಂಡಿತು. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಹೇಳಿಕೆ ನೀಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಮೊದಲು ಯಾವುದಾದರೂ ಅಧಿಕೃತ ಹೇಳಿಕೆಗಳು ಅಥವಾ ದೃಶ್ಯಗಳು ಇವೆಯೇ ಎಂದು ಹುಡುಕಿದೆವು. ಮೊಲೋನಿಯವರು ಬಂಧನಗಳ ಬಗ್ಗೆ ಯಾವುದೇ ನೇರ ಬಾಧ್ಯತೆಯನ್ನು ದೂರವಿರಿಸಿದ ಕಾರಣ ಯಾವುದೇ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಈ ಕುರಿತು ಆಕೆಯ ಹೇಳಿಕೆಯನ್ನು ವರದಿ ಮಾಡಿಲ್ಲ.
ಯಾವುದೇ ಅಧಿಕೃತ ಹೇಳಿಕೆಯನ್ನು ಕಾಣದೇ ಇದ್ದಾಗ, ನಾವು ಮತ್ತಷ್ಟು ಹುಡುಕಿದೆವು ಮತ್ತು ಇಟಲಿಯ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ರವರ ಹೇಳಿಕೆಗಳು ನಮಗೆ ದೊರಕಿದವು. ನವೆಂಬರ್ 21, 2024 ರಂದು ಪ್ರಕಟವಾದ ಡೈಲಿ ಸಬಾ ವರದಿಯಲ್ಲಿ ನೆತನ್ಯಾಹು “ಇಟಲಿಗೆ ಬಂದದ್ದೇ ಆದರೆ, ನಾವು ಆತನನ್ನು ಬಂಧಿಸಬೇಕಾಗುತ್ತದೆ” ಎಂದು ಕ್ರೊಸೆಟ್ಟೊರವರ ಹೇಳಿಕೆಯನ್ನು ಸೆರೆಹಿಡಿಯುತ್ತದೆ.
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಯಾವುದೇ ರೀತಿಯಲ್ಲಿ ಇಂತಹ ಸಂದೇಶವನ್ನು ನೀಡಿಲ್ಲ, ಆದರೆ ನವೆಂಬರ್ 2024ರಲ್ಲಿ ಆಕೆಯ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊರವರು ನೆತನ್ಯಾಹು ಇಟಲಿಗೆ ಭೇಟಿ ನೀಡಿದರೆ, ಅಂತಾರಾಷ್ಟ್ರೀಯ ಅಪರಾಧಿ ನ್ಯಾಯಾಲಯದ (ICC) ಸಹಿದಾರರಾದ ತಮಗೆ ಆತನನ್ನು ಬಂಧಿಸಲು “ಬಾಧ್ಯತೆ” ಇರುತ್ತದೆ ಎಂದು ಹೇಳಿದರು.
ಕೆಳಗೆ ವರದಿಯ ತುಣುಕನ್ನು ನೋಡಿ:
ದ ಟೈಮ್ಸ್ ಆಫ್ ಇಸ್ರೇಲ್ ಪ್ರಕಟಿಸಿದ ಮತ್ತೊಂದು ವರದಿಯಲ್ಲಿಯೂ ಕ್ರೊಸೆಟ್ಟೊ ರವರ ಹೇಳಿಕೆಯನ್ನು ವರದಿ ಮಾಡಲಾಗಿದೆ. NDTV ಮತ್ತು ಡೆಕ್ಕನ್ ಹೆರಾಲ್ಡ್ ಸೇರಿದಂತೆ ಇತರ ಮಾಧ್ಯಮಗಳೂ ಸಹ ಇದರ ಬಗ್ಗೆ ಬರೆದಿವೆ.
ಬೆಂಜಮಿನ್ ನೆತನ್ಯಾಹು ರವರನ್ನು ಬಂಧಿಸುವ ಬಗ್ಗೆ ಇಟಲಿಯ ನಿಲುವಿನ ಬಗ್ಗೆ ಇತ್ತೀಚಿನ ಸುದ್ದಿಗಳು ಮತ್ತು ಅಪ್ಡೇಟ್ ಗಳನ್ನು ಹುಡುಕಿದಾಗ, ಇಟಲಿಯು ಇದಕ್ಕೆ ವಿರುದ್ಧವಾಗಿದೆ ಎಂದು ನಮಗೆ ತಿಳಿದುಬಂದಿತು. ನೆತನ್ಯಾಹು ರವರ ಭೇಟಿಗಳ ಸಮಯದಲ್ಲಿ ಅವರನ್ನು ಐಸಿಸಿ ವಾರಂಟ್ ಅಡಿಯಲ್ಲಿ ಬಂಧಿಸಲಾಗುವುದಿಲ್ಲ ಎಂದು ಇಟಲಿಯು ಇಸ್ರೇಲಿ ಅಧಿಕಾರಿಗಳಿಗೆ ಭರವಸೆ ನೀಡಿರುವ ಬಗ್ಗೆ ಜನವರಿ 15, 2025 ರಂದು ದ ಟೈಮ್ಸ್ ಆಫ್ ಇಸ್ರೇಲ್ ಪ್ರಕಟಿಸಿದ ವರದಿಯಲ್ಲಿ ಬರೆಯಲಾಗಿದೆ. ಲೇಖನದ ತುಣುಕನ್ನು ಕೆಳಗೆ ನೋಡಿ:
ಡಿಸೆಂಬರ್ 2024 ರಲ್ಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ವಾರಂಟ್‌ಗಳ ಪ್ರಾಯೋಗಿಕತೆಯನ್ನು ಪ್ರಶ್ನಿಸಿದಾಗ ನಡೆದ ಆಂತರಿಕ ಚರ್ಚೆಗಳ ನಂತರ ಈ ಬದಲಾದ ನಿಲುವು ಮೂಡಿತು. i24 ನ್ಯೂಸ್‌ನ ಸುದ್ದಿ ವರದಿಯ ಪ್ರಕಾರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರಂಟ್‌ಗಳ ಜಾರಿಗೊಳಿಸುವಿಕೆಯನ್ನು ತಿರಸ್ಕರಿಸುವಲ್ಲಿ ಇಟಲಿಯು ಫ್ರಾನ್ಸ್‌ನೊಂದಿಗೆ ಕೈಜೋಡಿಸಿದೆ, ಈ ಮೂಲಕ ವಿಚಾರಣೆಯಿಂದ ರಾಜತಾಂತ್ರಿಕ ವಿನಾಯಿತಿ ನೀಡಿದೆ.
ಇಟಲಿಯ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಮೆಲೋನಿಯ X ಖಾತೆಯು ಸಾಮ್ಯಾಜಿಕ ಮಾಧ್ಯಮಗಳಲ್ಲಿ ಹೇಳಿಳ್ಳಲಾದ ಯಾವುದೇ ಹೇಳಿಕೆಯನ್ನು ತೋರಿಸುವುದಿಲ್ಲ. ಈ ವಿಷಯದ ಕುರಿತು ಮೆಲೋನಿಯವರಿಂದ ಯಾವುದೇ ಇತ್ತೀಚಿನ ಪ್ರಕಟಣೆಗಳನ್ನು ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿಲ್ಲ. ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂಥದ್ದು ಎನ್ನಬಹುದು.
ಇದನ್ನೂ ಓದಿ:
1960ರ ಸಿಂಧೂ ನೀರಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್ ರವರ ಪಾತ್ರದ ಬಗ್ಗೆ ಅಮಿತ್ ಶಾ ಮಾತನಾಡಿದ್ದರೇ? ಸತ್ಯ ಪರಿಶೀಲನೆ