ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ರವರು ಭಾರತದ ಆರ್ಥಿಕ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಜೈಶಂಕರ್ ರವರು ಅಂತಹ ಯಾವುದೇ ಹೇಳಿಕೆಯನ್ನು ಮಾಡಿಲ್ಲ.
ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ. —
*********************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಇತ್ತೀಚೆಗೆ ಹಲವಾರು ಬಳಕೆದಾರರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರವರ ಹೇಳಿಕೆಯೆಂನ್ನಲಾಗಿರುವ ಉಲ್ಲೇಖದೊಂದಿಗೆ ತಮ್ಮ ಟಿಪ್ಪಣಿಗಳನ್ನು ಹಂಚಿಕೊಂಡಿದ್ದಾರೆ. ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತವನ್ನು “ಮೃತ ಆರ್ಥಿಕ ವ್ಯವಸ್ಥೆ” ಎಂದು ಕರೆದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳನ್ನು ಮಾಡಲಾಗಿದೆ.
ಹಲವಾರು ಬಳಕೆದಾರರು ಎಸ್. ಜೈಶಂಕರ್ ರವರ ಚಿತ್ರಗಳನ್ನು ಈ ಮುಂದಿನ ಹೇಳಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: “ನಮ್ಮ ಆರ್ಥಿಕತೆ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ…ಭಾರತಕ್ಕೆ ರಷ್ಯಾದ ತೈಲದ ಹರಿವು ಮುಂದುವರೆಯಲಿದೆ”. ಅವರು ಈ ಹೇಳಿಕೆಯನ್ನು ಹೇಳಿರುವುದಾಗಿ ಮತ್ತು ಇದನ್ನು ವಿದೇಶಾಂಗ ಸಚಿವಾಲಯದ ಅಧಿಕೃತ ಹೇಳಿಕೆಯಾಗಿರುವುದಾಗಿ ಚಿತ್ರಿಸಲಾಗಿದೆ.
ಇತರ ಬಳಕೆದಾರರೂ ಸಹ ಇಂತಹ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ ಕಾಣಬಹುದು
“Our economy will not be run from the White House… Russian oil will continue to flow to India.”
🔥❤️ pic.twitter.com/GhO8T6wKrw— exsecular (@ExSecular) August 3, 2025
FACT CHECK
ಡಿಜಿಟೈ ಇಂಡಿಯಾ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ರವರು ಅಂತಹ ಯಾವುದೇ ಮಾತನ್ನು ಹೇಳಿಲ್ಲ ಎಂದು ನಮಗೆ ತಿಳಿದುಬಂತು. ಈ ಹೇಳಿಕೆಯಲ್ಲಿ ಪತ್ರಿಕಾಗೋಷ್ಠಿ ಅಥವಾ ಅಧಿಕೃತ ಹೇಳಿಕೆಯ ನೇರ ಉಲ್ಲೇಖವಿಲ್ಲ
ನಂತರ ನಾವು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಯಾವುದೇ ರೀತಿಯ ಅಧಿಕೃತ ಸೂಚನೆ ಬಂದಿದೆಯೇ ಎಂದು ಪರಿಶೀಲಿಸಿದೆವು ಆದರೆ ಅಂತಹ ಯಾವುದೇ ದೃಢೀಕರಣ ಕಂಡುಬಂದಿಲ್ಲ. ಮತ್ತೊಂದೆಡೆ, ಭಾರತೀಯ ವಿದೇಶಾಂಗ ಸಚಿವಾಲಯವು ಈ ಹೇಳಿಕೆಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ X ಪೋಸ್ಟ್ ಅನ್ನು ಬಿಡುಗಡೆ ಮಾಡಿದೆ.
ಆಗಸ್ಟ್ 3, 2025 ರಂದು, MEA ಫ್ಯಾಕ್ಟ್ಚೆಕ್ ಖಾತೆಯು ‘Middle_Eastern0’ ಹ್ಯಾಂಡಲ್ ಅನ್ನು ಇಂತಹ ನಕಲಿ ವದಂತಿಗಳನ್ನು ಹರಡಿದ್ದಕ್ಕಾಗಿ ಬಹಿರಂಗಗೊಳಿಸಿದೆ. ಪೋಸ್ಟ್ನಲ್ಲಿ ಹೀಗೆ ಬರೆಯಲಾಗಿತ್ತು: ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ ಎಚ್ಚರಿಕೆ! ಈ ಹ್ಯಾಂಡಲ್ (@Middle_Eastern0) ನಕಲಿ ಸುದ್ದಿಗಳೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಮಾಡುತ್ತಿದೆ. ಜಾಗರೂಕರಾಗಿರಿ.
ಪೋಸ್ಟ್ ಅನ್ನು ಕೆಳಗೆ ನೋಡಬಹುದು:
Disinformation and FAKE news alert!
This handle (@Middle_Eastern0) has been making several social media posts with FAKE News.
Be aware. #MEAFactCheck pic.twitter.com/yXUUzJwUGt
— MEA FactCheck (@MEAFactCheck) August 3, 2025
ಮುಂದುವರೆದಂತೆ, PIB ವರದಿಯೂ ಸಹ ಈ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತುಪಡಿಸಿದೆ ಮತ್ತು ನಾಗರಿಕರು ಸುಳ್ಳು ಸುದ್ದಿಗಳ ಬಲೆಗೆ ಬೀಳಬಾರದೆಂದು ಮತ್ತು ಜನರು ಸುದ್ದಿಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವಂತೆ ಒತ್ತಾಯಿಸಿದೆ.
🚨 Social media accounts @Middle_Eastern0 and @ChinainEnglis are spreading false claims, attributing fabricated statements to the Indian Ministry of External Affairs (@MEAIndia) and US President Donald Trump (@realDonaldTrump) regarding recent tariff-related developments.… pic.twitter.com/dpMScCPml5
— PIB Fact Check (@PIBFactCheck) August 4, 2025
ಆದ್ದರಿಂದ, ಈ ಹೇಳಿಕೆ ಸುಳ್ಳು ಮತ್ತು ಎಸ್. ಜೈಶಂಕರ್ ರವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ..
ಇದನ್ನೂ ಓದಿ: