ಹೇಳಿಕೆ/Claim: ಹವಾಮಾನದ ಬಗೆಗಿನ ಪ್ಯಾರಿಸ್ ಒಪ್ಪಂದದಿಂದ ಇಟಲಿ ಹಿಂದೆ ಸರಿದಿದೆ.
ಕಡೆನುಡಿ/Conclusion: ಸುಳ್ಳು. ಪ್ಯಾರಿಸ್ ಒಪ್ಪಂದದಿಂದ ಇಟಲಿ ಹೊರಬಂದಿದೆ ಎಂದು ಸೂಚಿಸುವಂತಹ ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ.
ರೇಟಿಂಗ್/Rating: ಸುಳ್ಳು—
**********************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
2015 ರಲ್ಲಿ ಸಹಿ ಮಾಡಲಾದ ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದವಾದ ಪ್ಯಾರಿಸ್ ಒಪ್ಪಂದದಲ್ಲಿ ಇಟಲಿ ಇನ್ನು ಮುಂದೆ ಇರುವುದಿಲ್ಲ ಎನ್ನುವ ವಿವಿಧ ಪೋಸ್ಟ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿವೆ. ಅನೇಕ X ಬಳಕೆದಾರರು ಜುಲೈ 9, 2025 ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೇಳಿಕೆಯನ್ನು ಮುಂದಿಟ್ಟರು.
ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲನ್ ರವರ ಫೋಟೋದೊಂದಿಗಿನ ಪೋಸ್ಟ್ ನ ಶೀರ್ಷಿಕೆ ಹೀಗಿತ್ತು “ಯುನೈಟೆಡ್ ಸ್ಟೇಟ್ಸ್ ನಂತರ, ಇಟಲಿ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುತ್ತಿದೆ”. ಪೋಸ್ಟ್ ಸುಮಾರು 3,380 ವೀಕ್ಷಣೆಗಳನ್ನು ಗಳಿಸಿತು.
After The United States
Italy is withdrawing from the Paris Climate Agreement pic.twitter.com/5X6lFEVFAO— AntWokFootBall (@WokBall) July 9, 2025
ಇನ್ಸ್ಟಾಗ್ರಾಮ್ನಲ್ಲಿ ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಹೇಳಿಕೆಯನ್ನು ಹಂಚಿಕೊಂಡಿದ್ದು, 16,500 ಕ್ಕೂ ಹೆಚ್ಚಿನ ಲೈಕ್ಗಳನ್ನು ಗಳಿಸಿದ್ದಾರೆ. ಪೋಸ್ಟ್ ಹೀಗಿತ್ತು “ಬ್ರೇಕಿಂಗ್ ನ್ಯೂಸ್. ಯು.ಎಸ್. ಮುಂದಾಳುತ್ವವನ್ನನುಸರಿಸಿ ಇಟಲಿಯು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯಲಿದೆ”. ಪೋಸ್ಟ್ ನ ಲಿಂಕ್ ಅನ್ನು ಇಲ್ಲಿ ನೋಡಿ.
View this post on Instagram
ಸತ್ಯ ಪರಿಶೀಲನೆ
ಡಿಸೆಂಬರ್ 12, 2015 ರಂದು UN ಹವಾಮಾನ ಬದಲಾವಣೆ ಸಮ್ಮೇಳನ (COP21)ದ ಸಂದರ್ಭದಲ್ಲಿ ಅಂಗೀಕರಿಸಲಾದ ಪ್ಯಾರಿಸ್ ಒಪ್ಪಂದವು, ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟದ ಮೇಲೆ 2°C ಗಿಂತ ಕಡಿಮೆಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿದ್ದು ಅದನ್ನು 1.5°C ಗೆ ಮಿತಗೊಳಿಸುವ ಪ್ರಯತ್ನಗಳನ್ನು ಹೊಂದಿದೆ.
ಡಿಜಿಟೈ ಇಂಡಿಯಾ ಪ್ಯಾರಿಸ್ ಒಪ್ಪಂದದಲ್ಲಿ ಇಟಲಿಯ ಸ್ಥಿತಿಯ ಬಗ್ಗೆ ವಿಶ್ವಾಸಾರ್ಹ ಸುದ್ದಿ ವರದಿಗಳು ಮತ್ತು ಅಧಿಕೃತ ಹೇಳಿಕೆಗಳನ್ನು ಗುರುತಿಸುವ ಸಲುವಾಗಿ ಅಂತರ್ಜಾಲದಲ್ಲಿ ನೈಜ-ಸಮಯದ ಹುಡುಕಾಟವನ್ನು ನಡೆಸಿತು. ಇಟಲಿ ಇನ್ನೂ ಪ್ಯಾರಿಸ್ ಹವಾಮಾನ ಒಪ್ಪಂದದ ಭಾಗವಾಗಿದೆ ಎಂದು ದೃಢೀಕರಿಸುವ ವರದಿಯೊಂದು ಸುದ್ದಿಮಾಧ್ಯಮವಾದ ಯೂರೋನ್ಯೂಸ್ನಲ್ಲಿ ನಮಗೆ ಕಂಡುಬಂತು.
ಯೂರೋನ್ಯೂಸ್ನ ವರದಿಯ ಲಿಂಕ್ ಅನ್ನು ಇಲ್ಲಿ ನೋಡಿ.
ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇಲಿನ ಖಾತೆಯನ್ನು ಜುಲೈ 18, 2025 ರಂದು ಅಮಾನತುಗೊಳಿಸಲಾಗಿದೆ.
ನಂತರ ನಾವು ಪ್ಯಾರಿಸ್ ಒಪ್ಪಂದದಲ್ಲಿ ಇಟಲಿಯ ಪ್ರಸ್ತುತ ಸದಸ್ಯತ್ವ ಮತ್ತು ಅನುಮೋದನೆ ಸ್ಥಿತಿಗತಿಯನ್ನು ದೃಢೀಕರಿಸಲು ಅಧಿಕೃತ ವಿಶ್ವಸಂಸ್ಥೆಯ ಒಪ್ಪಂದ ಸಂಗ್ರಹ ಪೋರ್ಟಲ್ ಅನ್ನು ಪರಿಶೀಲಿಸಲು ನಿರ್ಧರಿಸಿದೆವು ಮತ್ತು ಹಿಂತೆಗೆದುಕೊಳ್ಳುವಿಕೆಯ ಯಾವುದೇ ದಾಖಲೆ ಅಸ್ತಿತ್ವದಲ್ಲಿಲ್ಲ ಎಂದು ಕಂಡುಕೊಂಡೆವು. ವಿಶ್ವಸಂಸ್ಥೆಯ ಒಪ್ಪಂದ ಸಂಗ್ರಹ ವೆಬ್ಸೈಟ್ ಲಿಂಕ್ ಅನ್ನು ಇಲ್ಲಿ ನೋಡಿ.
ಪ್ಯಾರಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಇಟಲಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಭಾರತದ ಇತ್ತೀಚಿನ ಕ್ರಮಗಳನ್ನು ನಮ್ಮ ತಂಡವು ಗಮನಿಸಿತು. ಇಟಲಿಯ ಇತ್ತೀಚಿನ ಅಪ್ಡೇಟ್ ಗಳು ಇಲ್ಲಿವೆ- ಏಪ್ರಿಲ್ 22, 2016 ರಂದು ಅದರ ಸಹಿ ಮಾಡಿದ ದಿನಾಂಕ ಮತ್ತು ನವೆಂಬರ್ 11, 2016 ರಂದು ಅನುಮೋದನೆಯ ದಿನಾಂಕವೆಂದು ಇದು ತೋರಿಸುತ್ತದೆ. (ಕೆಳಗಿನ ಚಿತ್ರವನ್ನು ನೋಡಿ)
ಪ್ಯಾರಿಸ್ ಒಪ್ಪಂದಕ್ಕೆ ರಾಷ್ಟ್ರಗಳ “ಸಹಿ“ಯು, ಈ ಒಪ್ಪಂದ ಮತ್ತು ಗ್ರೀನ್ ಹೌಸ್ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವುದೂ ಸೇರಿದಂತೆ ಹಲವು ಗುರಿಗಳಿಗೆ ರಾಷ್ಟ್ರಗಳ ಆರಂಭಿಕ ಬದ್ಧತೆಯನ್ನು ಸೂಚಿಸುತ್ತದೆ.
ಪ್ಯಾರಿಸ್ ಒಪ್ಪಂದದ XXVII-7-d ವಿಧಿಯಲ್ಲಿ “ಅನುಮೋದನೆ” ಎಂಬುದು ಒಪ್ಪಂದದ ನಿಯಮಗಳಿಗೆ ಬದ್ಧವಾಗಿರಲು ಒಪ್ಪಿಗೆಯನ್ನು ವ್ಯಕ್ತಪಡಿಸಲು ಒಂದು ದೇಶವು ಮಾಡುವ ಔಪಚಾರಿಕ ಕಾನೂನು ಕಾಯ್ದೆಯನ್ನು ಸೂಚಿಸುತ್ತದೆ.
ಒಪ್ಪಂದದ ಉಲ್ಲೇಖ XXVII-7-d (ಪ್ಯಾರಿಸ್ ಒಪ್ಪಂದ) ಪರಿಶೀಲಿಸಿದಾಗ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮಾತ್ರ ಹಿಂತೆಗೆದುಕೊಳ್ಳುವಿಕೆಗೆ ಅರ್ಜಿ ಸಲ್ಲಿಸಿದ್ದು (ಇಲ್ಲಿ). ಇಟಲಿ ಒಪ್ಪಂದದಿಂದ ಹಿಂದೆ ಸರಿಯುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದರ ಚಿತ್ರವನ್ನು ಕೆಳಗೆ ನೋಡಿ.
2025 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಹಿಂಪಡೆಯುವಿಕೆವರೆಗಿನ ಎಲ್ಲಾ ಕ್ರಮಗಳ ಚಿತ್ರ ಇಲ್ಲಿದೆ.
ಮುಂದುವರಿದಂತೆ, ಭಾರತದ ಸಹಿಯ ದಿನಾಂಕ 22 ಏಪ್ರಿಲ್ 2016 ಮತ್ತು 2 ಅಕ್ಟೋಬರ್ 2016 ರಂದು ಅಂಗೀಕಾರದ ದಿನಾಂಕವನ್ನು ಪ್ರದರ್ಶಿಸುವ ಕ್ರಮಗಳು ಇಲ್ಲಿವೆ.
ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಇಟಲಿಯ ಯಾವುದೇ ಅಧಿಕೃತ ಸರ್ಕಾರಿ ವೆಬ್ಸೈಟ್ನಲ್ಲಿ ಯಾವುದೇ ಅಧಿಕೃತ ದಾಖಲೆಗಳು ಅಥವಾ ಹೇಳಿಕೆಗಳಿಲ್ಲ. ಇಟಲಿ ಸಹಿದಾರ ಮತ್ತು ಸಕ್ರಿಯ ಭಾಗಿಯಾಗಿ ಉಳಿದಿದೆ, ಮತ್ತು ಹಿಂತೆಗೆದುಕೊಳ್ಳುವ ಯಾವುದೇ ಅಧಿಕೃತ ಸೂಚನೆಗಳಿಲ್ಲ. ಹೀಗಾಗಿ, ಹೇಳಿಕೆ ಸುಳ್ಳು.