Don't Miss

ಜನ್ಮಸಿದ್ಧ ಹಕ್ಕಿನ ಕುರಿತ ಟ್ರಂಪ್ ರವರ ಆದೇಶದ ನಂತರ ಉಷಾ ವಾನ್ಸ್ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದೇ? ಸತ್ಯ-ಪರಿಶೀಲನೆ

ಹೇಳಿಕೆ/Claim: ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಅ ಅಕೆಯ ಪೌರತ್ವವನ್ನು ಹಿಂಪಡೆಯಲಾಗುವುದು.

ಕಡೆನುಡಿ/Conclusion:  ತಪ್ಪುದಾರಿಗೆಳೆಯುವ ಹೇಳಿಕೆ. ಜನ್ಮಸಿದ್ಧ ಪೌರತ್ವದ ಮೇಲಿನ ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಅದು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ.

ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಸತ್ಯ ಪರಿಶೀಲನೆ ವಿವರಗಳು

ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿತ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿ ಅಲ್ಪ ಸಮಯದಲ್ಲೇ, ಉಪಾಧ್ಯಕ್ಷರಾದ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರು ಹುಟ್ಟಿದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಆಕೆಯ ಪೌರತ್ವವನ್ನು ಹಿಂಪಡೆಯಲಾಗುವುದು ಎಂದು ಸೂಚಿಸುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹೇಳಿಕೆ ಇಲ್ಲಿದೆ: “ಜನ್ಮಸಿದ್ಧ ಪೌರತ್ವವನ್ನು ನಿಷೇಧಿಸುವ ತಮ್ಮ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರೆ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ವ್ಯಾನ್ಸ್ ರವರ ಪೌರತ್ವವನ್ನು ಹಿಂಪಡೆದುಕೊಳ್ಳಲಾಗುತ್ತದೆ. ಆಕೆಯ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರಲಿಲ್ಲ.”

ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

FACT-CHECK

ಡಿಜಿಟೈ ಇಂಡಿಯಾ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸಿದಾಗ, ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಮತ್ತು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ ಎಂದು ಸೂಚಿಸುವ ಯುಎಸ್ ನಾಗರಿಕರ ಹಲವಾರು ಪ್ರತಿಕ್ರಿಯೆಗಳು ಕಂಡುಬಂದವು.

“ಸೆಕ್ಷನ್ 2. ನೀತಿ. (ಎ) (1) ವ್ಯಕ್ತಿಯ ಜನನದ ಸಮಯದಲ್ಲಿ ತಾಯಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾನುಬಾಹಿರವಾಗಿ ಉಪಸ್ಥಿತರಿದ್ದರೆ, ಮತ್ತು ತಂದೆಯು ಯುನೈಟೆಡ್ ಸ್ಟೇಟ್ಸ್ ಪ್ರಜೆ ಅಥವಾ ಕಾನೂನುಬದ್ಧ ಪ್ರಜೆಯಾಗಿರದಿದ್ದರೆ, ಅಥವಾ (2) ಸದರಿ ವ್ಯಕ್ತಿಯ ಜನನದ ಸಮಯದಲ್ಲಿ ತಾಯಿಯ ಉಪಸ್ಥಿತಿ ಕಾನೂನುಬದ್ಧವಾಗಿದ್ದರೂ ತಾತ್ಕಾಲಿಕವಾಗಿದ್ದು, ತಂದೆ  ಯುನೈಟೆಡ್ ಸ್ಟೇಟ್ಸ್ ನ ಪ್ರಜೆ ಅಥವಾ ಕಾನೂನುಬದ್ಧ ಪ್ರಜೆಯಾಗಿರದಿದ್ದರೆ, ಅಂತಹ ವ್ಯಕ್ತಿಗಳಿಗೆ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಯಾವುದೇ ಇಲಾಖೆ ಅಥವಾ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್ ಪೌರತ್ವವನ್ನು ಗುರುತಿಸುವ ದಾಖಲೆಗಳನ್ನು ನೀಡಬಾರದು ಅಥವಾ ಯುನೈಟೆಡ್ ಸ್ಟೇಟ್ಸ್ ಪೌರತ್ವವನ್ನು ಗುರುತಿಸುವತ್ತ ಉದ್ದೇಶಿಸಿರುವ ರಾಜ್ಯ, ಸ್ಥಳೀಯ, ಅಥವಾ ಇತರೆ ಸರ್ಕಾರಗಳು ಅಥವಾ ಅಧಿಕಾರಿಗಳು ನೀಡಿದ ದಾಖಲೆಗಳನ್ನು ಸ್ವೀಕರಿಸಕೂಡದೆಂಬುದು ಯುನೈಟೆಡ್ ಸ್ಟೇಟ್ಸ್ ನ ನೀತಿಯಾಗಿದೆ.

(ಬಿ) ಈ ಸೆಕ್ಷನ್ ನ ಉಪಸೆಕ್ಷನ್ (ಎ) ಈ ಆದೇಶದ ದಿನಾಂಕದಿಂದ 30 ದಿನಗಳ ನಂತರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಇದು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ವಾನ್ಸ್‌ಗೆ ಅನ್ವಯಿಸುವುದಿಲ್ಲ ಮತ್ತು ಈ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*