Don't Miss

ಮೋದಿ ಸರ್ಕಾರವು ಸೌರ ಫಲಕಗಳನ್ನು ಬಳಸಿ ರೈಲು ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮೋದಿ ಸರ್ಕಾರವು ರೈಲು ಹಳಿಗಳ ನಡುವೆ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ಅವುಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆ.

ಕಡೆನುಡಿ/Conclusion: ತಪ್ಪು ನಿರೂಪಣೆ.  ಈ ಹೊಸ ಹೆಜ್ಜೆಯು ಸ್ವಿಟ್ಜರ್ಲೆಂಡ್‌ನ ಮೂಲದ ಸನ್-ವೇಸ್ ಎಂಬ ಸ್ಟಾರ್ಟ್‌-ಅಪ್‌ನಿಂದ ಬಂದಿದೆ.

ರೇಟಿಂಗ್/Rating: ತಪ್ಪು ನಿರೂಪಣೆ  .

*********************************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

*******************************************************

ಮೋದಿ ಸರ್ಕಾರವು ಹೊರತೆಗೆಯಬಹುದಾದ ಸೌರ ಫಲಕಗಳನ್ನು ಬಳಸಿಕೊಂಡು ರೈಲ್ವೆ ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆ ಎಂದು ಹೇಳುವ ಒಂದು ವೈರಲ್ ಪೋಸ್ಟ್ ಭಾರತೀಯ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೈಲುಗಳನ್ನು ನಿಲ್ಲಿಸಲಾಗುವುದಿಲ್ಲ ಮತ್ತು “ಸನ್-ವೇಸ್ ಎಂಬ ಭಾರತೀಯ ಸ್ಟಾರ್ಟ್-ಅಪ್” ಈ ನೂತನ ಹೆಜ್ಜೆಯ ಮುಂಚೂಣಿಯಲ್ಲಿದೆ ಎಂದು ಪೋಸ್ಟ್ ಸೂಚಿಸುತ್ತದೆ.

ಉದಾಹರಣೆಗೆ, ಬಳಕೆದಾರರು ಈ ಪೋಸ್ಟ್ ಅನ್ನು X ನಲ್ಲಿ ಹಂಚಿಕೊಂಡಿದ್ದಾರೆ:

ಪೋಸ್ಟ್ ಹೀಗಿದೆ:

“ಅಜೇಯ ಭಾರತ #ಗೋಗ್ರೀನ್ #ಗೇಮ್‌ಚೇಂಜರ್ ಪ್ರಧಾನಿ @narendramodi ಸರ್ಕಾರವು ರೈಲು ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆ – ಒಂದೇ ಒಂದು ರೈಲನ್ನು ನಿಲ್ಲಿಸದೆ. ಸನ್-ವೇಸ್ ಎಂಬ ಭಾರತೀಯ ಸ್ಟಾರ್ಟ್-ಅಪ್  ಹೊರತೆಗೆಯಬಹುದಾದ ಸೌರ ಫಲಕಗಳನ್ನು ನೇರವಾಗಿ ರೈಲ್ವೆ ಹಳಿಗಳ ನಡುವೆ ನಿಯೋಜಿಸುತ್ತಿದೆ ಮತ್ತು ಶುದ್ಧ ಇಂಧನವು ಹರಿಯುತ್ತಲೇ ಇರುವುದು. @PMOIndia”

ಮತ್ತೊಬ್ಬ ಲಿಂಕ್ಡ್‌ಇನ್ ಬಳಕೆದಾರರು ಕೆಳಗೆ ಕಾಣುವಂತೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ:

ಪೋಸ್ಟ್ ಲಿಂಕ್ ಇಲ್ಲಿದೆ.

ಸತ್ಯ ಪರಿಶೀಲನೆ:

ಡಿಜಿಟೈ ಇಂಡಿಯಾ ಪ್ರಮುಖ ಫ್ರೇಮ್ ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಚಿತ್ರವು ವಾಸ್ತವವಾಗಿ ಸ್ವಿಟ್ಜರ್ಲೆಂಡ್‌ನದ್ದಾಗಿದೆ ಎಂದು ಫಲಿತಾಂಶಗಳು ಬಹಿರಂಗಪಡಿಸಿದವು, ಅಲ್ಲಿ 2021 ರಲ್ಲಿ ಸ್ಥಾಪನೆಯಾದ ಸನ್-ವೇಸ್ ಎಂಬ ಸ್ಟಾರ್ಟ್-ಅಪ್ ಈ ಯೋಜನೆಯನ್ನು ಮುನ್ನಡೆಸುತ್ತಿದೆ. 2024 ರಲ್ಲಿ ತಮ್ಮ ಲೇಖನದಲ್ಲಿ ಈ ನೂತನ ಕ್ರಮವನ್ನು ವರದಿ ಮಾಡಿದವರಲ್ಲಿ ಗ್ರೇಟರ್ ಜಿನೀವಾ ಬರ್ನ್ ಏರಿಯಾ ಮೊದಲಿಗರಾಗಿದ್ದರು.

“ಅಸ್ತಿತ್ವದಲ್ಲಿರುವ ರೈಲು ಮೂಲಸೌಕರ್ಯವನ್ನು ಬಳಸಿಕೊಂಡು ಸೌರಶಕ್ತಿ ಉತ್ಪಾದನೆಯನ್ನು ವಿಸ್ತರಿಸುವ ಸನ್-ವೇಸ್ ನ ವಿಶಾಲ ದೃಷ್ಟಿಕೋನದ ಭಾಗ ಈ ಯೋಜನೆ. ಈ ಉಪಕ್ರಮವು, 2023ರಲ್ಲಿ ನ್ಯೂಕಾಟೆಲ್‌ನಲ್ಲಿ ಪೈಲಟ್ ಯೋಜನೆಯನ್ನು ಪ್ರಾರಂಭಿಸಿದ ಸನ್-ವೇಸ್ ನ ಹಿಂದಿನ ಕೆಲಸವನ್ನು ಆಧರಿಸಿದೆ.” ಎಂದು ಅವರು ಉಲ್ಲೇಖಿಸಿದ್ದಾರೆ.

ಕೆಳಗಿನ ಲೇಖನದಿಂದ ಒಂದು ಚಿತ್ರ ಇಲ್ಲಿದೆ:

ಏಪ್ರಿಲ್ 2025 ರಲ್ಲಿ NDTV ಸಹ ಸನ್-ವೇಸ್ ಸಂಸ್ಥೆಯು “ಪಶ್ಚಿಮ ಸ್ವಿಟ್ಜರ್‌ಲ್ಯಾಂಡ್‌ನ ಒಂದು ಸಣ್ಣ ಹಳ್ಳಿಯಾದ ಬುಟ್ಟೆಸ್‌ನಲ್ಲಿರುವ ರೈಲ್ವೆ ಹಳಿಗಳ 100-ಮೀಟರ್ ಭಾಗದಲ್ಲಿ 48 ಸೌರ ಫಲಕಗಳನ್ನು ಹೇಗೆ ಇರಿಸಿದೆ” ಎಂದು ವರದಿ ಮಾಡಿದೆ. ಲೇಖನದ ಲಿಂಕ್ ಅನ್ನು ಇಲ್ಲಿ ನೋಡಿ.

“ಲೌಸ್ಯಾನ್ ನಲ್ಲಿರುವ ಸ್ವಿಸ್ ಫೆಡರಲ್ ತಂತ್ರಜ್ಞಾನ ಸಂಸ್ಥೆಯಾದ EPFL ಸಹಾಯದೊಂದಿಗೆ ಹೊರತೆಗೆಯಬಹುದಾದ ವ್ಯವಸ್ಥೆಗೆ ಪೇಟೆಂಟ್ ಪಡೆದ ಮೊದಲ ಸಂಸ್ಥೆ ಸನ್-ವೇಸ್” ಎಂದು ಉಲ್ಲೇಖಿಸುತ್ತಾ ಯುರೋ ನ್ಯೂಸ್ ಕೂಡ ತಮ್ಮ ಲೇಖನದಲ್ಲಿ ಇದನ್ನು ಪ್ರತಿಧ್ವನಿಸಿದೆ. ಹೀಗಾಗಿ, ಸನ್-ವೇಸ್ ನಿಜಕ್ಕೂ ಸ್ವಿಸ್ ಸ್ಟಾರ್ಟ್ಅಪ್ ಆಗಿದೆಯೇ ಹೊರತು  ಆ ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿರುವಂತೆ ಭಾರತೀಯ ಸ್ಟಾರ್ಟ್ಅಪ್ ಅಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಇದಲ್ಲದೆ, ಈ ವಿಷಯದ ಬಗ್ಗೆ ಅಧಿಕೃತ ಭಾರತೀಯ ರೈಲ್ವೆ ಸರ್ಕಾರದಿಂದ ಇಲ್ಲಿಯವರೆಗೆ ಅಂತಹ ಯಾವುದೇ ಘೋಷಣೆಯಾಗಿಲ್ಲ. ದೇಶಾದ್ಯಂತ ಶುದ್ಧ ಇಂಧನ ಹರಿವನ್ನು ಹೆಚ್ಚಿಸುವ ಯೋಜನೆಗಳಿದ್ದರೂ, ರೈಲ್ವೆ ಹಳಿಗಳ ನಡುವೆ ಸೌರ ಫಲಕಗಳನ್ನು ಬಳಸುವುದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ.

ನಕಲಿ ಸುದ್ದಿಗಳನ್ನು ಹರಡುವ ಉದ್ದೇಶದೊಂದಿಗೆ ಚಿತ್ರವನ್ನು ಬದಲಾಯಿಸಲಾಗಿದೆ ಎಂಬುದು ಸ್ಪಷ್ಟ, ಇದು ಬಳಕೆದಾರರಿಂದ ತಪ್ಪಾಗಿ ಪ್ರತಿನಿಧಿಸಲ್ಪಟ್ಟ ಚಿತ್ರ ಎಂದು ಇದು ಸೂಚಿಸುತ್ತದೆ.

ಆದ್ದರಿಂದ, ಈ ಹೇಳಿಕೆ ಸುಳ್ಳು.

 

 

 

Leave a Reply

Your email address will not be published. Required fields are marked *

*