Don't Miss

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊದಲ್ಲಿ ಆಕೆ, “ನಾನು ಮುಸ್ಲಿಂ, ಆದರೆ ಪಾಕಿಸ್ತಾನಿಯಲ್ಲ. ನಾನು ಮುಸ್ಲಿಂ, ಆದರೆ ಭಯೋತ್ಪಾದಕಿಯಲ್ಲ, ಮತ್ತು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಎಂದು ಹೇಳುವುದನ್ನು ತೋರಿಸಲಾಗಿದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ. ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊವನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲು ಎಚ್ಚರಿಕೆಯಿಂದ ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ, ಆದರೆ ಆಕೆ ತೋರಿಸಲಾಗಿರುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ರೇಟಿಂಗ್/Rating: ತಪ್ಪು ನಿರೂಪಣೆ-

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ತ್ವರಿತ ಮಿಲಿಟರಿ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಕದನ ವಿರಾಮದ ನಂತರ, ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಒಂದು ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಲಾರಂಭಿಸಿದೆ.

“ನಾನು ಮುಸ್ಲಿಂ, ಆದರೆ ಪಾಕಿಸ್ತಾನಿ ಅಲ್ಲ. ನಾನು ಮುಸ್ಲಿಂ, ಆದರೆ ಭಯೋತ್ಪಾದಕಿಯಲ್ಲ, ಮತ್ತು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಎಂದು ಅಧಿಕಾರಿಯು ಭಾವೋದ್ರಿಕ್ತ ಹೇಳಿಕೆ ನೀಡುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ.

ಮೇ 7, 2025 ರಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತದ ಪ್ರತೀಕಾರದ ಮಿಲಿಟರಿ ಕ್ರಮದ ಕುರಿತು ಕರ್ನಲ್ ಖುರೇಷಿ ಮತ್ತು ವಿಂಗ್ ಕಮ್ಯಾಂಡರ್ ವ್ಯೋಮಿಕಾ ಸಿಂಘ್- ಕ್ರಮವಾಗಿ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ- ಮಾಧ್ಯಮಗಳಿಗೆ ವಿವರ ನೀಡಿದರು ಎಂದು ಶೀರ್ಷಿಕೆಯು ಸೂಚಿಸುತ್ತದೆ.

ಸತ್ಯ ಪರಿಶೀಲನೆ

ನಾವು ಅದನ್ನು ಕೈಗೆತ್ತಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಕರ್ನಲ್ ಖುರೇಷಿಯವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂಬುದು ಕಂಡುಬಂದಿದೆ. ಎಲ್ಲಾ ಕೀವರ್ಡ್ ಹುಡುಕಾಟಗಳಲ್ಲೂ ಕರ್ನಲ್ ಖುರೇಷಿಯವರ ಈ ಉಲ್ಲೇಖವನ್ನು ಕುರಿತು ವರದಿ ಮಾಡುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಪ್ರತಿಲಿಪಿಗಳು ನಮಗೆ ಕಂಡುಬಂದಿಲ್ಲ.

ಮುಂದುವರೆದಂತೆ, ವೈರಲ್ ವೀಡಿಯೊದಿಂದ ಕೆಲವು ಕೀಫ್ರೇಮ್‌ಗಳನ್ನು ನಾವು ತೆಗೆದುಕೊಂಡು ನೋಡಿದಾಗ ಅದರ ಕುರುಹುಗಳು ನಮ್ಮನ್ನು ಮೇ 7 ರಂದು ಯೂಟ್ಯೂಬ್‌ನಲ್ಲಿ ಆಲ್ ಇಂಡಿಯಾ ರೇಡಿಯೊದ ಸುದ್ದಿ ಸೇವೆಗಳ ವಿಭಾಗವು ಪೋಸ್ಟ್ ಮಾಡಿದ ಅಧಿಕೃತ ವೀಡಿಯೊಗೆ ಕರೆದೊಯ್ದವು. ಮೂಲ ಫೂಟೇಜ್ ನಲ್ಲಿ, ಖುರೇಷಿಯವರು ಆಪರೇಷನ್ ಸಿಂಧೂರ್‌ನ ಕಾರ್ಯಾಚರಣೆಯ ವಿವರಗಳನ್ನು ಚರ್ಚಿಸುತ್ತಾರೆ. ದೃಶ್ಯಗಳು ಹೊಂದಿಕೆಯಾಗುತ್ತವೆ, ಆದರೆ ವಿವಾದಾತ್ಮಕ ಉಲ್ಲೇಖವು ಇಲ್ಲವೇ ಇಲ್ಲ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿಯವರನ್ನೂ ಒಳಗೊಂಡಿದ್ದ ಸಂಪೂರ್ಣ ಪತ್ರಿಕಾಗೋಷ್ಠಿಯನ್ನು ನಾವು ಪರಿಶೀಲಿಸಿದೆವು, ಆದರೆ ವೀಡಿಯೊದಲ್ಲಿ ಹೇಳಿದ್ದಾರೆನ್ನುವ ವೈರಲ್ ನುಡಿಗಳನ್ನು ಕರ್ನಲ್ ಖುರೇಷಿ ಹೇಳುತ್ತಿರುವುದು ಎಲ್ಲೂ ಕಂಡುಬರಲಿಲ್ಲ.

ನಾವು AI/ಡೀಫ್ ಫೇಕ್ ಪತ್ತೆ ಸಾಧನವಾಗಿರುವ Resemble.ai ಯನ್ನು ಚಲಾಯಿಸಿದಾಗ, ಫಲಿತಾಂಶಗಳು ಸ್ಪಷ್ಟವಾದವು. ಸಂಶ್ಲೇಷಿತ ಆಡಿಯೋ ಮತ್ತು ಮಾರ್ಪಾಟು ಮಾಡಲಾದ ಬಾಯ್ಮಾತಿನ ಹೊಂದಾಣಿಕೆ ಸೇರಿದಂತೆ ಡೀಪ್‌ಫೇಕ್ ಕುಶಲತೆಯ ಲಕ್ಷಣಗಳು ವೀಡಿಯೊದಲ್ಲಿ ಕಂಡುಬಂದವು. ಆದ್ದರಿಂದ, ವೀಡಿಯೊದ ಧ್ವನಿಮುದ್ರಿಕೆಯು ಡೀಪ್‌ಫೇಕ್ ಆಗಿದೆ ಮತ್ತು ಅದು ನಿಜವಲ್ಲ.

ಇದನ್ನೂ ಓದಿ:

ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ನಕಲಿ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*