Don't Miss

ಭಾರತದ ಆರ್ಥಿಕ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ ಎಂದು ಎಸ್ ಜೈಶಂಕರ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ರವರು ಭಾರತದ ಆರ್ಥಿಕ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಜೈಶಂಕರ್ ರವರು ಅಂತಹ ಯಾವುದೇ ಹೇಳಿಕೆಯನ್ನು ಮಾಡಿಲ್ಲ.

ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ. —

*********************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಇತ್ತೀಚೆಗೆ ಹಲವಾರು ಬಳಕೆದಾರರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರವರ ಹೇಳಿಕೆಯೆಂನ್ನಲಾಗಿರುವ ಉಲ್ಲೇಖದೊಂದಿಗೆ ತಮ್ಮ ಟಿಪ್ಪಣಿಗಳನ್ನು ಹಂಚಿಕೊಂಡಿದ್ದಾರೆ. ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತವನ್ನು “ಮೃತ ಆರ್ಥಿಕ ವ್ಯವಸ್ಥೆ” ಎಂದು ಕರೆದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳನ್ನು ಮಾಡಲಾಗಿದೆ.

ಹಲವಾರು ಬಳಕೆದಾರರು ಎಸ್. ಜೈಶಂಕರ್ ರವರ ಚಿತ್ರಗಳನ್ನು ಈ ಮುಂದಿನ ಹೇಳಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: “ನಮ್ಮ ಆರ್ಥಿಕತೆ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ…ಭಾರತಕ್ಕೆ  ರಷ್ಯಾದ ತೈಲದ ಹರಿವು ಮುಂದುವರೆಯಲಿದೆ”. ಅವರು ಈ ಹೇಳಿಕೆಯನ್ನು ಹೇಳಿರುವುದಾಗಿ ಮತ್ತು ಇದನ್ನು ವಿದೇಶಾಂಗ ಸಚಿವಾಲಯದ ಅಧಿಕೃತ ಹೇಳಿಕೆಯಾಗಿರುವುದಾಗಿ ಚಿತ್ರಿಸಲಾಗಿದೆ.

ಇತರ ಬಳಕೆದಾರರೂ ಸಹ ಇಂತಹ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ ಕಾಣಬಹುದು

FACT CHECK

ಡಿಜಿಟೈ ಇಂಡಿಯಾ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ರವರು ಅಂತಹ ಯಾವುದೇ ಮಾತನ್ನು ಹೇಳಿಲ್ಲ ಎಂದು ನಮಗೆ ತಿಳಿದುಬಂತು. ಈ ಹೇಳಿಕೆಯಲ್ಲಿ ಪತ್ರಿಕಾಗೋಷ್ಠಿ ಅಥವಾ ಅಧಿಕೃತ ಹೇಳಿಕೆಯ ನೇರ ಉಲ್ಲೇಖವಿಲ್ಲ

ನಂತರ ನಾವು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಯಾವುದೇ ರೀತಿಯ ಅಧಿಕೃತ ಸೂಚನೆ ಬಂದಿದೆಯೇ ಎಂದು ಪರಿಶೀಲಿಸಿದೆವು ಆದರೆ ಅಂತಹ ಯಾವುದೇ ದೃಢೀಕರಣ ಕಂಡುಬಂದಿಲ್ಲ. ಮತ್ತೊಂದೆಡೆ, ಭಾರತೀಯ ವಿದೇಶಾಂಗ ಸಚಿವಾಲಯವು ಈ ಹೇಳಿಕೆಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ X ಪೋಸ್ಟ್ ಅನ್ನು ಬಿಡುಗಡೆ ಮಾಡಿದೆ.

ಆಗಸ್ಟ್ 3, 2025 ರಂದು, MEA ಫ್ಯಾಕ್ಟ್‌ಚೆಕ್ ಖಾತೆಯು ‘Middle_Eastern0’ ಹ್ಯಾಂಡಲ್ ಅನ್ನು ಇಂತಹ ನಕಲಿ ವದಂತಿಗಳನ್ನು ಹರಡಿದ್ದಕ್ಕಾಗಿ ಬಹಿರಂಗಗೊಳಿಸಿದೆ. ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿತ್ತು: ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ ಎಚ್ಚರಿಕೆ! ಈ ಹ್ಯಾಂಡಲ್ (@Middle_Eastern0) ನಕಲಿ ಸುದ್ದಿಗಳೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮಾಡುತ್ತಿದೆ. ಜಾಗರೂಕರಾಗಿರಿ.

ಪೋಸ್ಟ್ ಅನ್ನು ಕೆಳಗೆ ನೋಡಬಹುದು:

ಮುಂದುವರೆದಂತೆ, PIB ವರದಿಯೂ ಸಹ ಈ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತುಪಡಿಸಿದೆ ಮತ್ತು ನಾಗರಿಕರು ಸುಳ್ಳು ಸುದ್ದಿಗಳ ಬಲೆಗೆ ಬೀಳಬಾರದೆಂದು ಮತ್ತು ಜನರು ಸುದ್ದಿಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವಂತೆ ಒತ್ತಾಯಿಸಿದೆ.

ಆದ್ದರಿಂದ, ಈ ಹೇಳಿಕೆ ಸುಳ್ಳು ಮತ್ತು ಎಸ್. ಜೈಶಂಕರ್ ರವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.. 

ಇದನ್ನೂ ಓದಿ:

ಬಿಜೆಪಿ ಆಡಳಿತವು ಜೀವಂತ ಡೈನೋಸಾರ್‌ಗಳ ಮರಳುವಿಕೆಗೆ ಕಾರಣವಾಯಿತೇ? ಸತ್ಯ ಪರಿಶೀಲನೆExternal Affairs Minister of India S Jaishankar

ಮೋದಿ ಸರ್ಕಾರವು ಸೌರ ಫಲಕಗಳನ್ನು ಬಳಸಿ ರೈಲು ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*