Don't Miss

ಕೃಷಿ ನೀರಿನ ಬಳಕೆಯ ಮೇಲೆ ತೆರಿಗೆ ವಿಧಿಸಲು ಮೋದಿ ಸರ್ಕಾರ ಯೋಜಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೃಷಿ ನೀರಿನ ಸೆಳೆಯುವಿಕೆಯ ಮೇಲೆ ತೆರಿಗೆ ವಿಧಿಸಲು ಮೋದಿ ಸರ್ಕಾರ ಯೋಜಿಸುತ್ತಿದೆ.

ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಜಲಶಕ್ತಿಯ ಕೇಂದ್ರ ಸಚಿವರು ಈ ಹೇಳಿಕೆಯನ್ನು ನಿರಾಕರಿಸಿದ್ದು ಕೃಷಿ ನೀರಿನ ಬಳಕೆಯ ವಿಷಯವು ರಾಜ್ಯ ಪಟ್ಟಿಯ ಅಡಿಯಲ್ಲಿ ಬರುತ್ತದೆ ಎಂದು ಸ್ಪಷ್ಟಪಡಿಸಿದರು.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ —

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

****************************************************************

ಕೇಂದ್ರ ಸರ್ಕಾರವು ಕೃಷಿ ಉದ್ದೇಶಗಳಿಗಾಗಿ ನೀರಿನ ಬಳಕೆಯ ಮೇಲೆ ತೆರಿಗೆ ವಿಧಿಸಲು ಯೋಜಿಸುತ್ತಿದೆ ಎಂಬ ಹೇಳಿಕೆಯನ್ನು ಹೊಂದಿರುವ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಮೋದಿ ಸರ್ಕಾರ ಈಗ ಕೃಷಿ ನೀರಿನ ಮೇಲೆ ತೆರಿಗೆ ವಿಧಿಸಲು ಯೋಜಿಸುತ್ತಿದೆ. ಅವರು ಈಗಾಗಲೇ ಕರಾಳ ಕೃಷಿ ಕಾಯ್ದೆಗಳ ಮೂಲಕ ರೈತರನ್ನು ತೊಂದರೆಗೊಳಿಸಲು ಪ್ರಯತ್ನಿಸಿದ್ದಾರೆ ಮತ್ತೀಗ ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಅವರು ಕೊಟ್ಟ ಮಾತಾಗಿತ್ತು, ಆದರೆ ಈಗ ಅವರಿಂದಲೇ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ” ಎಂಬ ಹೇಳಿಕೆಯನ್ನು ಹಂಚಿಕೊಳ್ಳಲಾಗಿತ್ತು. ಪೋಸ್ಟ್ ನಲ್ಲಿ ಈ ಹೇಳಿಕೆಯನ್ನು ಬೆಂಬಲಿಸಲು ದೃಶ್ಯಗಳೂ ಸಹ ಒಳಗೊಂಡಿದ್ದವು.

ಇನ್ನೊಂದು ವರದಿಯೂ ಕೆಳಗೆ ಕಾಣುವಂತೆ ಅದೇ ವಿಷಯವನ್ನು ಹೇಳಿದೆ:

FACT-CHECK

ವಾಟ್ಸಾಪ್ ವಿನಂತಿಯನ್ನು ಸ್ವೀಕರಿಸಿದ ನಂತರ, ಡಿಜಿಟೈ ಇಂಡಿಯಾ ತಂಡವು ಕೂಡಲೆ, ಸರ್ಕಾರಿ ವೆಬ್‌ಸೈಟ್‌ನಲ್ಲಿ ಈ ಹೇಳಿಕೆಯನ್ನು ಬೆಂಬಲಿಸಲು ಯಾವುದಾದರೂ ಅಧಿಕೃತ ಮೂಲ ಕಾಣುತ್ತದೆಯೇ ಎಂದು ಹುಡುಕಿತು, ಆದರೆ ಅಂತಹ ಯಾವುದೇ ಪ್ರಸ್ತಾಪ ಕಂಡುಬಂದಿಲ್ಲ.  ಸುದ್ದಿ ವರದಿಗಳನ್ನು ಮತ್ತಷ್ಟು ಹುಡುಕಾಡಿದಾಗ ಕಂಡುಬಂದದ್ದೇನೆಂದರೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ತಪ್ಪುದಾರಿಗೆಳೆಯುವ ಶೀರ್ಷಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಈ ಹೇಳಿಕೆಯನ್ನು ಹಂಚಿಕೊಳ್ಳಲು ಕಾರಣವಾಯಿತು.

ವಾಸ್ತವವಾಗಿ, ಈ ಸುದ್ದಿಗಾಗಿ ಗೂಗಲ್ ನ್ಯೂಸ್ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅದು ಕೇಂದ್ರ ಜಲಸಂಪನ್ಮೂಲ ಸಚಿವ (ಜಲಶಕ್ತಿ) ಸಿಆರ್ ಪಾಟೀಲ್ ಅವರ ಪತ್ರಿಕಾಗೋಷ್ಠಿಯ ಸುದ್ದಿಯನ್ನು ತೆರೆಯುತ್ತದೆ, ಅದರಲ್ಲಿ ಅವರು ಈ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ರೈತರಿಗೆ ಸರಬರಾಜು ಮಾಡಲಾಗುವ ನೀರಿನ ಮೇಲೆ ತೆರಿಗೆ ವಿಧಿಸಲು ಕೇಂದ್ರವು ಯೋಜನೆಯನ್ನು ಹೊಂದಿದೆಯೇ ಎಂದು ಕೇಳಿದಾಗ, ಸಚಿವರು ಈ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದರು ಮತ್ತು ಈ ವಿಷಯವು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತದೆಂದೂ ಮತ್ತು ಇದು ರಾಜ್ಯದ ವಿಷಯವಾಗಿದೆ (ರಾಜ್ಯ ಪಟ್ಟಿ (ಪಟ್ಟಿ II) ಭಾರತೀಯ ಸಂವಿಧಾನದ ನಮೂದು 17) ಎಂದೂ ಮಾಧ್ಯಮಗಳಿಗೆ ಅವರು ತಿಳಿಸಿದರು. ಕೆಳಗೆ ಕಾಣುವಂತೆ PIB ಕೂಡ ಈ ಹೇಳಿಕೆಯನ್ನು ಪರಿಶೀಲಿಸಿದೆ:

ವಾರ್ಷಿಕ ಅಂತರ್ಜಲ ಸೆಳೆಯುವಿಕೆ ವರದಿಯ ಪ್ರಕಾರ, ಒಟ್ಟು 239.16 ಶತಕೋಟಿ ಘನ ಮೀಟರ್ (BCM) ನೀರಿನಲ್ಲಿ ಕೃಷಿ ವಲಯವು 87% ರಷ್ಟು ಪಾಲು ಹೊಂದಿದೆ, ಕೆಲವು ರಾಜ್ಯಗಳಲ್ಲಿ ವಿವೇಚನಾರಹಿತ ಸೆಳೆಯುವಿಕೆಯಿಂದಾಗಿ ಅಂತರ್ಜಲ ವೇಗವಾಗಿ ಕ್ಷೀಣಿಸಲು ಇದು ಕಾರಣವಾಗಿದೆ ಎಂದೂ ಹೇಳಲಾಗಿದೆ. ಆದಾಗ್ಯೂ, ಕೇಂದ್ರವು ಕೃಷಿ ನೀರಿನ ಬಳಕೆಯ ಮೇಲೆ ತೆರಿಗೆ ವಿಧಿಸಲು ಯೋಜಿಸುತ್ತಿದೆ ಎಂಬ ಹೇಳಿಕೆಯು ದೂರದ ಮಾತು ಮತ್ತು ಸುಳ್ಳು.

ಇದನ್ನೂ ಓದಿ::

‘PM ಕರದಾತಾ ಕಲ್ಯಾಣ ಯೋಜನಾ’ ಎಂಬ ಯೋಜನೆಯನ್ನು ಕೇಂದ್ರವು ತೆರಿಗೆದಾರರಿಗೆ ಬಹುಮಾನರೂಪವಾಗಿ ಪ್ರಾರಂಭಿಸಿದೆಯೇ?

ಮಹಾ ಕುಂಭಮೇಳದ ಸಮಾರೋಪ ದಿನದಂದು ನಡೆದ ವಾಯು ಪ್ರದರ್ಶನದಲ್ಲಿ ತ್ರಿಶೂಲ ರಚನೆಯ ಚಿತ್ರ ವೈರಲ್ ಆಗಿದೆ; ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*