ಹೇಳಿಕೆ/Claim: ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಜನರು ತಿಂಗಳಿಗೆ 10 ಲಕ್ಷ ರೂ. ಗಳಿಸಲು ಸಹಾಯ ಮಾಡುವ ಹಣಕಾಸು ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವುದನ್ನು/ಅನುಮೋದಿಸುತ್
ಕಡೆನುಡಿ/Conclusion: ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ವೀಡಿಯೊ AI ಮೂಲಕ ರಚಿಸಲ್ಪಟ್ಟದ್ದು ಮತ್ತಿದು ಮೋಸದ ಯೋಜನೆಗಳನ್ನು ಉತ್ತೇಜಿಸಲು ರಚಿಸಲಾಗಿದೆ. ಸುಧಾ ಮೂರ್ತಿಯವರು ಈ ಹೇಳಿಕೆಗಳನ್ನು ಅಧಿಕೃತವಾಗಿ ನಿರಾಕರಿಸಿದ್ದಾರೆ ಮತ್ತು ನಾಗರಿಕರು ಜಾಗರೂಕರಾಗಿರಲು ಒತ್ತಾಯಿಸಿದ್ದಾರೆ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು. — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಇತ್ತೀಚೆಗೆ, ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ವೀಡಿಯೊವೊಂದು ಹರಿದಾಡುತ್ತಿದೆ, ಇದರಲ್ಲಿ ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಹಣಕಾಸಿನ ಹೂಡಿಕೆಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. “ಟ್ರಯೇಡ್ ವೈನ್” ಎಂಬ ಖಾತೆಯು ವ್ಯಾಪಕವಾಗಿ ಹಂಚಿಕೊಂಡಿರುವ ಈ ವೀಡಿಯೊ, ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಬಳಕೆದಾರರನ್ನು ಒತ್ತಾಯಿಸುತ್ತದೆ. ಇದು ಕ್ವಾಂಟಮ್AI ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಮೂರ್ತಿ, ನಿರ್ಮಲಾ ಸೀತಾರಾಮನ್, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯವರಂತಹ ಪ್ರಸಿದ್ಧ ವ್ಯಕ್ತಿಗಳ ಬೆಂಬಲ ಹೊಂದಿರುವ AI-ಚಾಲಿತ ವೇದಿಕೆಯೆಂದು ತೋರಿಸುವ ಪಠ್ಯ ಪರದೆಗಳಿಗೆ ಕರೆದೊಯ್ಯುತ್ತದೆ. ಇದು ರೂ. 25,000 ಕನಿಷ್ಠ ಠೇವಣಿಯೊಂದಿಗೆ ಸರಕು ಮಾರುಕಟ್ಟೆಗಳಲ್ಲಿ 98% ಲಾಭದಾಯಕತೆಯ ಭರವಸೆ ನೀಡುತ್ತದೆ.
X ಬಳಕೆದಾರರಾದ ‘vani_mehrotra’ ಎಂಬವರು ಜಾಗೃತಿ ಮೂಡಿಸಲು ಮತ್ತು ಅಂತಹ ವಂಚನೆಗಳಿಗೆ ಬಲಿಯಾಗದಂತೆ ಜನರನ್ನು ಎಚ್ಚರಿಸಲು ಪೂರ್ಣ ವೀಡಿಯೊದ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ವೀಡಿಯೊವನ್ನು ಇಲ್ಲಿ ಅವರ ಪೋಸ್ಟ್ನಲ್ಲಿ ಕಾಣಬಹುದು.

ವೀಡಿಯೊದ ಸಂಪೂರ್ಣ ಅನುವಾದ ಹೀಗಿದೆ: “ಹಲವಾರು ಹೂಡಿಕೆದಾರರು ಈಗಾಗಲೇ ಸೇರಿದ್ದು ತಿಂಗಳಿಗೆ 10 ಲಕ್ಷ ರೂ.ಗಳ ಮೇಲೆ ಗಳಿಸುತ್ತಿದ್ದಾರೆ. ದುರದೃಷ್ಟವಶಾತ್, ನಮ್ಮ ತಂಡವು ಹೊಸ ಗ್ರಾಹಕರ ಒಳಹರಿವನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ನಾವು ಈಗ ನೋಂದಣಿಯನ್ನು ನಿಲ್ಲಿಸಬೇಕಾಗುತ್ತಿದೆ. ಸೇರಲು ಬಯಸುವ ಎಲ್ಲರಿಗೂ ಈ ದಿನದ ಅಂತ್ಯದವರೆಗೆ ಮತ್ತು ನಾನು ಈ ವೀಡಿಯೊದ ಕೆಳಗೆ ಇರಿಸುವ ಲಿಂಕ್ ಮೂಲಕ ಮಾತ್ರ ನೋಂದಾಯಿಸಲು ಅವಕಾಶವಿರುತ್ತದೆ. ಲಿಂಕ್ ಇನ್ನೂ ಸಕ್ರಿಯವಾಗಿದ್ದು ನೀವು ಅದನ್ನು ತೆರೆಯಲು ಸಾಧ್ಯವಾಗುತ್ತಿದ್ದರೆ, ಅಭಿನಂದನೆಗಳು. ನಿಮಗಿನ್ನೂ ಹೂಡಿಕೆದಾರರಾಗಲು ಅವಕಾಶವಿದೆ.”
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಈ ವೀಡಿಯೊ ಡೀಪ್ಫೇಕ್ ಆಗಿದ್ದು, ಸುಧಾ ಮೂರ್ತಿಯವರ ಚಿತ್ರವನ್ನು ಸ್ಕ್ಯಾಂನ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳಲು ಕುಶಲತೆಯಿಂದ ರಚಿಸಲಾಗಿದೆ. ಸ್ಪಷ್ಟೀಕರಣ ನೀಡುವ ವೀಡಿಯೊದಲ್ಲಿ, ಸುಧಾ ಮೂರ್ತಿಯವರು ಅಂತಹ ವೀಡಿಯೊಗಳನ್ನು ಅಲ್ಲಗಳೆದು, ನಾಗರಿಕರು ಅಂತಹ ವಂಚನೆಗಳ ಬಗ್ಗೆ ಜಾಗೃತರಾಗಬೇಕೆಂದು ಒತ್ತಾಯಿಸಿದ್ದಾರೆ.
ವಿವರಗಳು:
ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಸುಧಾ ಮೂರ್ತಿ ಹೂಡಿಕೆ ಯೋಜನೆ” ಎಂಬ ಪದಪುಂಜದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಯಾವುದೇ ವಿಶ್ವಾಸಾರ್ಹ ಸುದ್ದಿಯು ಈ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಮತ್ತು ಸರ್ಕಾರದಿಂದಲೂ ಅಂತಹ ಯಾವುದೇ ಅಧಿಕೃತ ಮಾಹಿತಿ ಇಲ್ಲ. ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಲೋಗೋಗಳನ್ನು ಬಳಸಲಾದ ಇತರ ಸಂಸ್ಥೆಗಳೂ ಇದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇದರ ನಂತರ, ಅದರ ಮೂಲದ ಬಗ್ಗೆ ತಿಳಿಯಲು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾಯಿತು, ಆದರೆ ಅದನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಂತರ ನಾವು ವೀಡಿಯೊದಿಂದ ಧ್ವನಿಮುದ್ರೆಯನ್ನು ತೆಗೆದು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅದನ್ನು AI ಡಿಟೆಕ್ಟರ್ ನಲ್ಲಿ ಹಾಕಿ ನೋಡಿದೆವು. ಫಲಿತಾಂಶಗಳು ಕೇವಲ 47% ನಿಜವೆಂದು ಕಂಡುಬಂತು, ಇದು AI ರಚಿತವಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಫಲಿತಾಂಶಗಳನ್ನು ಕೆಳೆಗೆ ನೋಡಿ-

ಯಾವುದೇ ಅಧಿಕೃತ ಸ್ಪಷ್ಟೀಕರಣಕ್ಕಾಗಿ ಪರಿಶೀಲಿಸಿದಾಗ, ಸುಧಾ ಮೂರ್ತಿಯವರು ಜನವರಿ 21, 2026 ರಂದು ತಮ್ಮ ಅಧಿಕೃತ X ಖಾತೆಯಲ್ಲಿ ನೀಡಿರುವ ನೇರ ಎಚ್ಚರಿಕೆ ಕಂಡುಬಂತು, ಇದರಲ್ಲಿ ಅವರು ಹೂಡಿಕೆಗಳನ್ನು ಉತ್ತೇಜಿಸಲು ತಮ್ಮ ಚಿತ್ರ ಮತ್ತು ಧ್ವನಿಯನ್ನು ಬಳಸಿರುವ ನಕಲಿ ವೀಡಿಯೊಗಳು ತಮ್ಮ ಒಪ್ಪಿಗೆಯಿಲ್ಲದೆ ರಚಿಸಲಾದ ಡೀಪ್ಫೇಕ್ಗಳಾಗಿವೆ ಎಂದು ಹೇಳಿದ್ದಾರೆ. ಅವರು ಅಧಿಕೃತ ಮಾಧ್ಯಮಗಳು ಪರಿಶೀಲನೆ ನಡೆಸಬೇಕೆಂದು ಕೇಳಿಕೊಂಡರು ಮತ್ತು ತಮಗೆ ತಿಳಿದಿರುವ ಜನರು ಈ ವಂಚನೆಗಳಿಂದ ಹಣವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. “ಈ ಮೋಸದ ವೀಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ” ಎಂದು ಪೋಸ್ಟ್ ಮತ್ತಷ್ಟು ಎಚ್ಚರಿಸುತ್ತದೆ.
I want to alert you to fake videos circulating online that falsely use my image and voice to promote financial schemes and investments. These are deepfakes created without my knowledge or consent.
Please do not make any financial decisions based on these fraudulent videos. I urge… pic.twitter.com/JyJTIR78wQ— Smt. Sudha Murty (@SmtSudhaMurty) January 21, 2026
ಅದೇ ಸಂದೇಶವನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿದೆ, ಸ್ಕ್ರೀನ್ಶಾಟ್ ಕೆಳಗೆ ನೋಡಬಹುದು-

ಕೊನೆಯದಾಗಿ, ಈ ಮೋಸದ ವೀಡಿಯೊದಲ್ಲಿ ಕಂಡುಬಂದ ಕ್ವಾಂಟಮ್AI ಹೂಡಿಕೆಯ ಬಗ್ಗೆ ನಾವು ಹುಡುಕಿದೆವು. ಕ್ವಾಂಟಮ್AI ಎಂಬುದು ಪ್ರಖ್ಯಾತರು ಮತ್ತು ರಾಜಕಾರಣಿಗಳನ್ನು ಒಳಗೊಂಡ ಡೀಪ್ಫೇಕ್ಗಳ ಮೂಲಕ ಆಗಾಗ್ಗೆ ಪ್ರಚಾರ ಮಾಡಲಾಗುವ ಮೋಸದ ಯೋಜನೆಯಾಗಿದೆ ಎಂದು ಒಂದು ವರದಿಯಿಂದ ನಮಗೆ ತಿಳಿದುಬಂದಿತು. ಕ್ವಾಂಟಮ್AI ಹೇಗೆ “ಬೋರಿಸ್ ಜಾನ್ಸನ್, ಇಲಾನ್ ಮಸ್ಕ್, ಜೆಫ್ ಬೆಜೋಸ್, ಏಂಜಲೀನಾ ಜೋಲೀ, ರಯಾನ್ ರೆನಾಲ್ಡ್ಸ್ರಂತಹ ಖ್ಯಾತ ವ್ಯಕ್ತಿಗಳನ್ನು ಬಳಸಿ ಹಲವಾರು ಜನರು ತಮ್ಮ ಹಣವನ್ನು ಹಸ್ತಾಂತರಿಸುವಂತೆ ಮೋಸಗೊಳಿಸಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ಹೀಗಾಗಿ, ವೀಡಿಯೊ AI ಮೂಲಕ ರಚಿಸಲ್ಪಟ್ಟಿರುವಂಥದ್ದು, ಆದ್ದರಿಂದ ಅದು ಸಂಪೂರ್ಣವಾಗಿ ಸುಳ್ಳು.
ಸಂಬಂಧಿತ ವೀಡಿಯೊಗಳು:
Digiteye Kannada Fact Checkers